ADVERTISEMENT

ಪೆಟ್ರೋಲ್‌ ದರ 7 ತಿಂಗಳ ಹಿಂದಿನ ಮಟ್ಟಕ್ಕೆ ಇಳಿಕೆ

ಪಿಟಿಐ
Published 12 ಫೆಬ್ರುವರಿ 2020, 17:25 IST
Last Updated 12 ಫೆಬ್ರುವರಿ 2020, 17:25 IST
ಪೆಟ್ರೋಲ್
ಪೆಟ್ರೋಲ್    

ಬೆಂಗಳೂರು: ಕೊರೊನಾ ವೈರಸ್‌ ಪರಿಣಾಮವಾಗಿ ಜಾಗತಿಕ ತೈಲ ಬೇಡಿಕೆ ತಗ್ಗಿದೆ. ಇದರಿಂದಪೆಟ್ರೋಲ್‌ ದರ ಬುಧವಾರ ಏಳು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ತಿಂಗಳ ಹಿಂದೆ ಪ್ರತಿ ಲೀಟರಿಗೆ ₹ 78.56 ಇತ್ತು. ಇದು ಬುಧವಾರ ₹ 74.39ಕ್ಕೆ ಇಳಿಕೆ ಕಂಡಿದೆ. 2019ರ ಜುಲೈ 3 ರಂದು ಲೀಟರಿಗೆ ₹ 72.83ರಂತೆ ಮಾರಾಟವಾಗಿತ್ತು.

ಡೀಸೆಲ್‌ ದರವೂ ಒಂದು ತಿಂಗಳಿನಲ್ಲಿ ಶೇ 6ರಷ್ಟು ಇಳಿಕೆಯಾಗಿದ್ದು, ಜನವರಿ 11ರಂದು ₹ 71.48 ಇದ್ದ ದರವು ₹ 67.07ಕ್ಕೆ ಇಳಿಕೆಯಾಗಿದೆ. ಬ್ರೆಂಟ್‌ ತೈಲ ದರ ಒಂದು ತಿಂಗಳಿನಲ್ಲಿ ಶೇ 21ರಷ್ಟು ಇಳಿಕೆ ಆಗಿದೆ. ಇದರಿಂದ ಇಂಧನ ದರವೂ ಕಡಿಮೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.