ನವದೆಹಲಿ: ಜವಳಿ ವಲಯದ ಉದ್ದಿಮೆಗಳು ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆಯ ಅಡಿ ಹೊಸದಾಗಿ ಅರ್ಜಿ ಸಲ್ಲಿಸಲು ಇರುವ ಕಡೆಯ ದಿನಾಂಕವನ್ನು ಕೇಂದ್ರ ಸರ್ಕಾರವು ಡಿಸೆಂಬರ್ 31ರವರೆಗೆ ವಿಸ್ತರಿಸಿದೆ.
‘ಉದ್ಯಮ ವಲಯವು ತೋರಿರುವ ಉತ್ಸಾಹದ ಕಾರಣದಿಂದಾಗಿ ಸರ್ಕಾರವು ಇನ್ನೊಂದು ಅವಕಾಶವನ್ನು ಸಂಬಂಧಪಟ್ಟವರಿಗೆ ನೀಡುತ್ತಿದೆ’ ಎಂದು ಕೇಂದ್ರ ಜವಳಿ ಸಚಿವಾಲಯವು ಹೇಳಿದೆ.
ಪಿಎಲ್‌ಐ ಯೋಜನೆಯ ಬಗ್ಗೆ ಉದ್ಯಮ ವಲಯವು ಹೆಚ್ಚಿನ ಉತ್ಸಾಹ ತೋರಿಸಿರುವುದಕ್ಕೆ ಪ್ರತಿಯಾಗಿ ಅರ್ಜಿ ಸಲ್ಲಿಸಲು ಇರುವ ಕಡೆಯ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ಆಸಕ್ತರು ಅರ್ಜಿಗಳನ್ನು pli.texmin.gov.in ವೆಬ್‌ಸೈಟ್ ಮೂಲಕ ಸಲ್ಲಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.