ADVERTISEMENT

ಅವಧಿ ವಿಮೆ ಹೆಚ್ಚಿನ ಆಸಕ್ತಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 18:42 IST
Last Updated 30 ಅಕ್ಟೋಬರ್ 2020, 18:42 IST

ಬೆಂಗಳೂರು: ಅವಧಿ ವಿಮೆಯನ್ನು ಎಷ್ಟು ಜನ ಖರೀದಿಸಿದ್ದಾರೆ ಎಂಬ ಬಗ್ಗೆ ತನ್ನ ಆ್ಯಪ್ ಮೂಲಕ ಸಮೀಕ್ಷೆ ನಡೆಸಿರುವ ಪಾಲಿಸಿ ಬಜಾರ್ ಜಾಲತಾಣವು, ‘ದೇಶದಾದ್ಯಂತ ಶೇಕಡ 44ರಷ್ಟು ಮಂದಿ ಗ್ರಾಹಕರು ಈ ವಿಮೆ ಸೌಲಭ್ಯ ಪಡೆದುಕೊಂಡಿದ್ದಾರೆ’ ಎಂದು ಹೇಳಿದೆ. ಆನ್‌ಲೈನ್‌ ಮೂಲಕ ವಿಮೆಯನ್ನು ಮಾರಾಟ ಮಾಡುವ ವಹಿವಾಟಿನಲ್ಲಿ ಪಾಲಿಸಿ ಬಜಾರ್ ತೊಡಗಿಸಿಕೊಂಡಿದೆ.

ಒಟ್ಟು 22,726 ಜನರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಸೆಪ್ಟೆಂಬರ್ 10ರಿಂದ 25ರ ನಡುವೆ ಈ ಸಮೀಕ್ಷೆ ನಡೆದಿದೆ. ಅವಧಿ ವಿಮೆ ಖರೀದಿಸಿದವರಲ್ಲಿ ಶೇಕಡ 50ಕ್ಕಿಂತ ಹೆಚ್ಚಿನವರು ₹ 1 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ವಿಮೆಯನ್ನು ಖರೀದಿಸಿದ್ದಾರೆ ಎಂದು ಪಾಲಿಸಿ ಬಜಾರ್ ಹೇಳಿದೆ. ‘ಅವಧಿ ವಿಮೆ ಪಾಲಿಸಿಗಳನ್ನು ಜನ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದು ಪಾಲಿಸಿ ಬಜಾರ್ ಸಿಇಒ ಸರ್ಬ್‌ವೀರ್‌ ಸಿಂಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT