
ಹೂಡಿಕೆ
(ಐಸ್ಟೋಕ್ ಚಿತ್ರ)
ಬೆಂಗಳೂರು: ಆನ್‌ಲೈನ್ ಮೂಲಕ ಹಣಕಾಸಿನ ಸಲಹೆ, ಮಾಹಿತಿ ಒದಗಿಸುವ ಪಾಲಿಸಿಬಜಾರ್ ಕಂಪನಿಯು ಗ್ರಾಹಕರಿಗೆ ಹೆಚ್ಚಿನ ಸೇವೆ ಒದಗಿಸುವ ಉದ್ದೇಶದಿಂದ ತನ್ನ ಆಫ್‌ಲೈನ್ ಜಾಲವನ್ನು ವಿಸ್ತರಿಸಲು ಮುಂದಾಗಿದೆ.
ಗ್ರಾಹಕರ ಜೊತೆ ಅಗತ್ಯ ಮಾತುಕತೆ ನಡೆಸಲು ಕಂಪನಿಯು ಈಗ 400ಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಹೊಂದಿದ್ದು, ಅವರ ಸಂಖ್ಯೆಯನ್ನು 600ಕ್ಕಿಂತ ಹೆಚ್ಚು ಮಾಡಲಿದೆ.
ಗ್ರಾಹಕರು ಪ್ರಮುಖವಾದ ಹಣಕಾಸಿನ ತೀರ್ಮಾನಗಳನ್ನು ಕೈಗೊಳ್ಳುವಾಗ ವೈಯಕ್ತಿಕವಾಗಿ ಸಲಹೆ ಪಡೆಯಲು ಬಯಸುವುದು ಹೆಚ್ಚಾಗುತ್ತಿದೆ ಎಂದು ಪಾಲಿಸಿಬಜಾರ್‌ನ ಪ್ರಕಟಣೆ ತಿಳಿಸಿದೆ.
‘ಜನರು ಹಣಕಾಸಿನ ಸಂಗತಿಗಳ ಬಗ್ಗೆ ಆನ್‌ಲೈನ್ ಮೂಲಕ ಮಾಹಿತಿ ಹುಡುಕುತ್ತಾರೆ. ನಂತರ ಅವರು ತಜ್ಞರ ಜೊತೆ ಮಾತುಕತೆ ನಡೆಸಲು ಬಯಸಬಹುದು. ಅವರು ತಮ್ಮಲ್ಲಿನ ಪ್ರಶ್ನೆಗಳನ್ನು ಕೇಳಲು, ಮಾತನಾಡಲು ಒಬ್ಬರು ಬೇಕು ಎಂದು ಬಯಸುತ್ತಾರೆ’ ಎಂದು ಪಾಲಿಸಿಬಜಾರ್‌ನ ಅವಧಿ ವಿಮೆ ವಿಭಾಗದ ಮುಖ್ಯಸ್ಥ ವರುಣ್ ಅಗರ್ವಾಲ್ ಹೇಳಿದ್ದಾರೆ.
ಮಹಾನಗರಗಳಾದ ಹೈದರಾಬಾದ್, ದೆಹಲಿ, ಬೆಂಗಳೂರು, ಪುಣೆ ಮತ್ತು ಮುಂಬೈನಲ್ಲಿ ಇಂತಹ ಪ್ರವೃತ್ತಿ ಹೆಚ್ಚಾಗಿ ಕಂಡುಬರುತ್ತಿದೆ. ಇವಲ್ಲದೆ, ಮೊದಲ ಹಾಗೂ ಎರಡನೆಯ ಹಂತಗಳ ನಗರಗಳಲ್ಲಿಯೂ ಈ ಬಗೆಯ ಪ್ರವೃತ್ತಿ ಕಾಣಿಸುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.