ADVERTISEMENT

ಅಮುಲ್ ಹಾಲಿನ ಬೆಲೆ ಏರಿಕೆ

ಪಿಟಿಐ
Published 17 ಆಗಸ್ಟ್ 2022, 2:57 IST
Last Updated 17 ಆಗಸ್ಟ್ 2022, 2:57 IST
   

ಆನಂದ್:ಗುಜರಾತ್ ಸಹಕಾರ ಹಾಲು ಮಾರಾಟ ಮಹಾಮಂಡಳವು (ಜಿಸಿಎಂಎಂಎಫ್) ಅಮೂಲ್‌ ಬ್ರ್ಯಾಂಡ್‌ ಅಡಿಯಲ್ಲಿ ಮಾರಾಟ ಮಾಡುವ ಹಾಲಿನ ದರವನ್ನು ಲೀಟರಿಗೆ ₹ 2ರಷ್ಟು ಹೆಚ್ಚಿಸಿದೆ.

‘ಗೋಲ್ಡ್‌’, ‘ತಾಜಾ’ ಮತ್ತು ‘ಶಕ್ತಿ’ ಹೆಸರಿನಲ್ಲಿ ಮಾರಾಟವಾಗುವ ಹಾಲಿನ ಬೆಲೆ ಬುಧವಾರದಿಂದ ಜಾಸ್ತಿ ಆಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಉತ್ಪಾದನಾ ವೆಚ್ಚ ಹೆಚ್ಚಾಗಿರುವ ಕಾರಣ ಈ ಬೆಲೆ ಏರಿಕೆ ಎಂದು ಅದು ಹೇಳಿದೆ. ಒಂದು ವರ್ಷದಲ್ಲಿ ಪಶು ಆಹಾರದ ಬೆಲೆಯು ಸರಿಸುಮಾರು ಶೇಕಡ 20ರಷ್ಟು ಜಾಸ್ತಿ ಆಗಿದೆ ಎಂದು ಮಹಾಮಂಡಳವು ತಿಳಿಸಿದೆ. ಗ್ರಾಹಕರು ನೀಡುವ ಹಣದಲ್ಲಿ ಶೇ 80ರಷ್ಟನ್ನು ಅಮುಲ್, ಹಾಲು ಉತ್ಪಾದಕರಿಗೆ ವರ್ಗಾಯಿಸುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.