ADVERTISEMENT

ಸರ್ಕಾರಿ ಬ್ಯಾಂಕ್‌ಗಳಲ್ಲಿ ಶೇ 49ರಷ್ಟು ಎಫ್‌ಡಿಐ ಬಗ್ಗೆ ಪರಿಶೀಲನೆ

ಪಿಟಿಐ
Published 2 ಫೆಬ್ರುವರಿ 2026, 13:08 IST
Last Updated 2 ಫೆಬ್ರುವರಿ 2026, 13:08 IST
ಎಫ್‌ಡಿಐ
ಎಫ್‌ಡಿಐ   

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಪ್ರಮಾಣವನ್ನು ಶೇಕಡ 49ಕ್ಕೆ ಹೆಚ್ಚಿಸುವ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಪರಿಶೀಲನೆ ನಡೆಸುತ್ತಿದೆ ಎಂದು ಕೇಂದ್ರ ಹಣಕಾಸು ಸೇವೆಗಳ ಕಾರ್ಯದರ್ಶಿ ಎಂ. ನಾಗರಾಜು ಹೇಳಿದ್ದಾರೆ.

ಈಗಿನ ನಿಯಮಗಳ ಪ್ರಕಾರ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ವಿದೇಶಿ ನೇರ ಹೂಡಿಕೆಗೆ ಶೇ 20ರ ಮಿತಿ ಇದೆ. ‘ಎಫ್‌ಡಿಐ ಮಿತಿಯನ್ನು ಶೇ 49ಕ್ಕೆ ಹೆಚ್ಚಿಸುವುದರ ಬಗ್ಗೆ ಬೇರೆ ಬೇರೆ ಸಚಿವಾಲಯಗಳ ನಡುವೆ ಸಮಾಲೋಚನೆ ನಡೆಯುತ್ತಿದೆ’ ಎಂದು ನಾಗರಾಜು ಹೇಳಿದ್ದಾರೆ.

ಖಾಸಗಿ ಬ್ಯಾಂಕ್‌ಗಳಲ್ಲಿ ಶೇ 74ರಷ್ಟು ಎಫ್‌ಡಿಐಗೆ ಅವಕಾಶ ಕಲ್ಪಿಸಲಾಗಿದೆ. ಖಾಸಗಿ ಬ್ಯಾಂಕ್‌ಗಳಲ್ಲಿ ಶೇ 49ರಷ್ಟು ಎಫ್‌ಡಿಐಗೆ ಸರ್ಕಾರದ ಅನುಮತಿಯ ಅಗತ್ಯ ಇಲ್ಲ. ಅದಕ್ಕಿಂತ ಹೆಚ್ಚಿನ ಪ್ರಮಾಣದ ಎಫ್‌ಡಿಐಗೆ ಸರ್ಕಾರದಿಂದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.

ADVERTISEMENT

ಸರ್ಕಾರಿ ಸ್ವಾಮ್ಯದ 12 ಬ್ಯಾಂಕ್‌ಗಳಲ್ಲಿ ಕೇಂದ್ರ ಸರ್ಕಾರದ ಷೇರುಗಳ ಸಂಖ್ಯೆಯು 2020ರ ನಂತರದಲ್ಲಿ ಕಡಿಮೆ ಆಗಿಲ್ಲ. ಆದರೆ ಕೆಲವು ಬ್ಯಾಂಕ್‌ಗಳು ಹೊಸದಾಗಿ ಷೇರುಗಳನ್ನು ವಿತರಣೆ ಮಾಡಿ ಬಂಡವಾಳ ಸಂಗ್ರಹಿಸಿರುವ ಕಾರಣದಿಂದಾಗಿ ಆ ಬ್ಯಾಂಕ್‌ಗಳಲ್ಲಿ ಸರ್ಕಾರದ ಷೇರುಗಳ ಪ್ರಮಾಣ ಕಡಿಮೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.