ADVERTISEMENT

ರ‍್ಯಾಂಕ್‌ಎಂಎಫ್‌ನ ಸ್ಮಾರ್ಟ್‌ ‘ಸಿಪ್‌’

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 19:45 IST
Last Updated 29 ಆಗಸ್ಟ್ 2019, 19:45 IST

ಬೆಂಗಳೂರು: ಹಣಕಾಸು ತಂತ್ರಜ್ಞಾನ ಕ್ಷೇತ್ರದ ಸ್ಟಾರ್ಟ್‌ಅಪ್‌ ಸ್ಯಾಮ್ಕೊ ಸೆಕ್ಯುರಿಟೀಸ್ ಲಿಮಿಟೆಡ್, ರ‍್ಯಾಂಕ್‍ ಎಂಎಫ್‌ನ ಹೊಸ ವ್ಯವಸ್ಥಿತ ಹೂಡಿಕೆ ಯೋಜನೆಯನ್ನು (ಸ್ಮಾರ್ಟ್ ಎಸ್‍ಐಪಿ–ಸಿಪ್‌) ಪರಿಚಯಿಸಿದೆ.

ಇತ್ತೀಚೆಗೆ ಆರಂಭವಾಗಿರುವ ರ‍್ಯಾಂಕ್‌ ಎಂಎಫ್‌ (www.rankmf.com) ಅಂತರ್ಜಾಲ ತಾಣವು ಮ್ಯೂಚುವಲ್ ಫಂಡ್ ಸಂಶೋಧನೆ ಮತ್ತು ಹೂಡಿಕೆ ತಾಣವಾಗಿದೆ.

ಮ್ಯೂಚುವಲ್ ಫಂಡ್‍ಗಳಲ್ಲಿ ಹೂಡಿಕೆ ಮಾಡುವವರಿಗೆ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ನೆರವು ನೀಡಲು ಇದನ್ನು ಆರಂಭಿಸಲಾಗಿದೆ. ಲಭ್ಯ ಇರುವ ಹಲವಾರು ಯೋಜನೆಗಳಲ್ಲಿ ಸೂಕ್ತವಾದುದನ್ನು ಆಯ್ಕೆ ಮಾಡಿಕೊಳ್ಳಲು ಈ ತಾಣವು ನೆರವು ನೀಡಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.