ADVERTISEMENT

ನಿಯಮ ಉಲ್ಲಂಘನೆ: ಎಚ್‌ಎಸ್‌ಬಿಸಿಗೆ ₹ 1.74 ಕೋಟಿ ದಂಡ ವಿಧಿಸಿದ ಆರ್‌ಬಿಐ

​ಪ್ರಜಾವಾಣಿ ವಾರ್ತೆ
Published 8 ಮೇ 2023, 13:48 IST
Last Updated 8 ಮೇ 2023, 13:48 IST
ಆರ್‌ಬಿಐ
ಆರ್‌ಬಿಐ   

ನವದೆಹಲಿ: 'ನಿಯಂತ್ರಣ ನಿಯಮಗಳ ಪಾಲನೆಯಲ್ಲಿ ನ್ಯೂನತೆ' ಕಂಡುಬಂದ ಹಿನ್ನೆಲೆಯಲ್ಲಿ ಹಾಂಗ್‌ಕಾಂಗ್‌ ಮತ್ತು ಶಾಂಘೈ ಬ್ಯಾಂಕಿಂಗ್‌ ಕೋ–ಆಪರೇಷನ್‌ ಲಿಮಿಟೆಡ್‌ಗೆ (ಎಚ್‌ಎಸ್‌ಬಿಸಿ) ₹ 1.74 ಕೋಟಿ (2.12 ಲಕ್ಷ ಡಾಲರ್‌) ದಂಡ ವಿಧಿಸಿರುವುದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸೋಮವಾರ ತಿಳಿಸಿದೆ.

ದೇಶದ ಕ್ರೆಡಿಟ್‌ ಇನ್‌ಫರ್ಮೇಷನ್‌ ಬ್ಯೂರೋಗೆ ಮಾಹಿತಿ ಸಲ್ಲಿಸುವ ವಿಚಾರದಲ್ಲಿಯೂ ಎಚ್‌ಎಸ್‌ಬಿಸಿ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT