ಮುಂಬೈ: ಮೃತಪಟ್ಟ ಗ್ರಾಹಕರ ಬ್ಯಾಂಕ್ ಖಾತೆಗಳು ಮತ್ತು ಲಾಕರ್‌ಗಳ ಮೇಲಿನ ಕ್ಲೇಮುಗಳನ್ನು 15 ದಿನದೊಳಗೆ ಇತ್ಯರ್ಥಪಡಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ಪರಿಷ್ಕೃತ ಮಾನದಂಡಗಳನ್ನು ಹೊರಡಿಸಿದೆ. ಕ್ಲೇಮ್ ಇತ್ಯರ್ಥ ವಿಳಂಬವಾದರೆ ನಾಮನಿರ್ದೇಶಿತರಿಗೆ ಪರಿಹಾರವನ್ನು ನಿಗದಿಪಡಿಸಿದೆ.
ಈ ನಿರ್ದೇಶನಗಳು ಮೃತಪಟ್ಟ ಗ್ರಾಹಕರ ಠೇವಣಿ ಖಾತೆಗಳಲ್ಲಿನ ಕ್ಲೇಮುಗಳು, ಸುರಕ್ಷಿತ ಠೇವಣಿ, ಲಾಕರ್‌ನಲ್ಲಿರುವ ವಸ್ತುಗಳ ಇತ್ಯರ್ಥಕ್ಕೆ ಸಂಬಂಧಿಸಿವೆ ಎಂದು ತಿಳಿಸಿದೆ.
ಮೃತಪಟ್ಟ ಗ್ರಾಹಕರಿಗೆ ಸಂಬಂಧಿಸಿದಂತೆ ಕ್ಲೇಮುಗಳ ಇತ್ಯರ್ಥದಲ್ಲಿ ಬ್ಯಾಂಕುಗಳು ವಿಭಿನ್ನ ಮಾರ್ಗಗಳನ್ನು ಅನುಸರಿಸುತ್ತಿದೆ. ಇದನ್ನು ಸುವ್ಯವಸ್ಥಿತಗೊಳಿಸುವ ಗುರಿಯನ್ನು ಈ ಪರಿಷ್ಕೃತ ಸೂಚನೆಗಳು ಹೊಂದಿವೆ. ಇದು ಗ್ರಾಹಕ ಸೇವೆಯ ಗುಣಮಟ್ಟದಲ್ಲಿ ಸುಧಾರಣೆ ತರಲಿದೆ. ಈ ಪರಿಷ್ಕೃತ ಸೂಚನೆಗಳನ್ನು 2026ರ ಮಾರ್ಚ್ 31ರ ಒಳಗಾಗಿ ಸಾಧ್ಯವಾದಷ್ಟು ಬೇಗ ಜಾರಿಗೆ ತರಲಾಗುವುದು ಎಂದು ತಿಳಿಸಿದೆ.
ಸೇಫ್ ಡಿಪಾಸಿಟ್ ಲಾಕರ್‌ಗೆ ಸಂಬಂಧಿಸಿದಂತೆ ನಿಗದಿತ ಸಮಯದೊಳಗೆ ಕ್ಲೇಮ್ ಇತ್ಯರ್ಥವಾಗದಿದ್ದರೆ ಬ್ಯಾಂಕ್‌ಗಳು ಗ್ರಾಹಕರಿಗೆ ಪ್ರತಿ ದಿನ ₹5 ಸಾವಿರದಂತೆ ಪರಿಹಾರ ನೀಡಬೇಕು ಎಂದು ಆರ್‌ಬಿಐ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.