ADVERTISEMENT

ಜಿಲ್ಲಾ ಮತ್ತು ರಾಜ್ಯ ಸಹಕಾರ ಬ್ಯಾಂಕ್‌ ವಿಲೀನಕ್ಕೆ ಮಾರ್ಗಸೂಚಿ

ಪಿಟಿಐ
Published 25 ಮೇ 2021, 7:20 IST
Last Updated 25 ಮೇ 2021, 7:20 IST

ಮುಂಬೈ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳನ್ನು (ಡಿಸಿಸಿಬಿ) ರಾಜ್ಯ ಸಹಕಾರಿ ಬ್ಯಾಂಕ್‌ಗಳ (ಎಸ್‌ಟಿಸಿಬಿ) ಜೊತೆ ವಿಲೀನ ಮಾಡುವ ಪ್ರಸ್ತಾವಗಳನ್ನು ಕೆಲವು ಷರತ್ತುಗಳಿಗೆ ಅನುಗುಣವಾಗಿ ಪರಿಗಣಿಸುವುದಾಗಿ ಆರ್‌ಬಿಐ ಸೋಮವಾರ ಹೇಳಿದೆ. ವಿಲೀನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಬರಬೇಕು ಎಂಬುದು ಷರತ್ತುಗಳ ಪೈಕಿ ಒಂದು.

ಎಸ್‌ಟಿಸಿಬಿ ಮತ್ತು ಡಿಸಿಸಿಬಿ ವಿಲೀನಕ್ಕೆ ಆರ್‌ಬಿಐ ಅನುಮೋದನೆ ಬೇಕು. ವಿಲೀನಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಕೆಲವು ರಾಜ್ಯ ಸರ್ಕಾರಗಳು ಆರ್‌ಬಿಐ ಬಾಗಿಲು ತಟ್ಟಿದ್ದವು. ಈಗ ಆರ್‌ಬಿಐ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಸಿದ್ಧಪಡಿಸಿದೆ.

ವಿಲೀನಗೊಂಡ ನಂತರ ಬ್ಯಾಂಕ್‌ಗೆ ಹೆಚ್ಚುವರಿ ಬಂಡವಾಳ ನೀಡಲು ಕಾರ್ಯತಂತ್ರ, ಅಗತ್ಯವಿದ್ದರೆ ಹಣಕಾಸಿನ ನೆರವು ನೀಡುವ ಭರವಸೆ, ಲಾಭ ಆಗುವ ರೀತಿಯಲ್ಲಿ ವಹಿವಾಟು ನಡೆಸುವ ಯೋಜನೆ, ಬ್ಯಾಂಕ್‌ನ ಆಡಳಿತದ ಕುರಿತು ವಿವರಣೆಯನ್ನೂ ಪ್ರಸ್ತಾವದ ಜೊತೆಯಲ್ಲಿ ಆರ್‌ಬಿಐಗೆ ನೀಡಬೇಕಾಗುತ್ತದೆ.

ADVERTISEMENT

ರಾಜ್ಯ ಸರ್ಕಾರ ಸಿದ್ಧಪಡಿಸುವ ಪ್ರಸ್ತಾವನೆಯನ್ನು ನಬಾರ್ಡ್‌ ಪರಿಶೀಲಿಸಬೇಕು, ಆ ಪ್ರಸ್ತಾವನೆಯನ್ನು ಅನುಮೋದಿಸಬೇಕು. ವಿಲೀನಕ್ಕೆ ಅಗತ್ಯ ಸಂಖ್ಯೆಯ ಷೇರುದಾರರ ಒಪ್ಪಿಗೆ ಸಿಗಬೇಕು. ‘ವಿಲೀನದ ಪ್ರಸ್ತಾವನೆಯನ್ನು ಆರ್‌ಬಿಐ, ನಬಾರ್ಡ್‌ ಜೊತೆ ಸಮಾಲೋಚಿಸಿ ಪರಿಶೀಲಿಸುತ್ತದೆ’ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.