
ಮುಂಬೈ: ₹2,000 ಮುಖಬೆಲೆಯ ₹5,817 ಕೋಟಿ ಮೌಲ್ಯದ ನೋಟುಗಳು ಇನ್ನೂ ಚಲಾವಣೆಯಲ್ಲಿವೆ ಎಂದು ಶನಿವಾರ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಬಿಡುಗಡೆ ಮಾಡಿದ ಪ್ರಕಟಣೆಯಿಂದ ತಿಳಿದುಬಂದಿದೆ.
₹2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುತ್ತಿರುವುದಾಗಿ 2023ರ ಮೇ 19ರಂದು ಆರ್‌ಬಿಐ ಘೋಷಿಸಿತ್ತು.
2023ರ ಮೇ 19ರಂದು ವ್ಯವಹಾರ ಮುಕ್ತಾಯದ ಸಮಯದಲ್ಲಿ ₹3.56 ಲಕ್ಷ ಕೋಟಿ ಮೌಲ್ಯದ ₹2,000 ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. 2025ರ ಅಕ್ಟೋಬರ್ 31ರ ವ್ಯವಹಾರ ಮುಕ್ತಾಯದ ಸಮಯದಲ್ಲಿ ₹5,817 ಕೋಟಿ ಮೌಕ್ಯದ ನೋಟುಗಳು ಚಲಾವಣೆಯಲ್ಲಿವೆ ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ.
₹2,000 ಮುಖಬೆಲೆಯ ನೋಟುಗಳ ಪೈಕಿ ಶೇ 98.37 ರಷ್ಟು ಹಿಂತಿಪಡೆಯಲಾಗಿದೆ ಎಂದು ಅದು ಹೇಳಿದೆ.
2023ರ ಮೇ 19ರಿಂದ ಆರ್‌ಬಿಐನ 19 ವಿತರಣಾ ಕಚೇರಿಗಳಲ್ಲಿ ₹2,000 ನೋಟುಗಳ ವಿನಿಮಯ ಸೌಲಭ್ಯ ಲಭ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.