ADVERTISEMENT

ರಿಯಲ್ ಎಸ್ಟೇಟ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್‌ಗಳಿಗೆ ಸಾಲ ನೀಡಲು RBI ಪರಿಶೀಲನೆ

ಪಿಟಿಐ
Published 6 ಫೆಬ್ರುವರಿ 2026, 16:01 IST
Last Updated 6 ಫೆಬ್ರುವರಿ 2026, 16:01 IST
<div class="paragraphs"><p>ರಿಯಲ್ ಎಸ್ಟೇಟ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್‌ಗಳಿಗೆ ಸಾಲ ನೀಡಲು ಪರಿಶೀಲನೆ</p></div>

ರಿಯಲ್ ಎಸ್ಟೇಟ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್‌ಗಳಿಗೆ ಸಾಲ ನೀಡಲು ಪರಿಶೀಲನೆ

   

ಬೆಂಗಳೂರು: ರಿಯಲ್ ಎಸ್ಟೇಟ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್‌ಗಳಿಗೆ (ಆರ್‌ಇಐಟಿ) ಕೆಲವು ಸುರಕ್ಷತಾ ಕ್ರಮಗಳೊಂದಿಗೆ ಸಾಲ ನೀಡಲು ಬ್ಯಾಂಕ್‌ಗಳಿಗೆ ಅವಕಾಶ ನೀಡುವ ಬಗ್ಗೆ ಆರ್‌ಬಿಐ ಪರಿಶೀಲನೆ ನಡೆಸುತ್ತಿದೆ.

ಆರಂಭದಲ್ಲಿ ವಾಣಿಜ್ಯ ಬ್ಯಾಂಕ್‌ಗಳು ಈ ಸಂಸ್ಥೆಗಳಿಗೆ ಸಾಲ ನೀಡಲು ಅನುಮತಿ ಇಲ್ಲ. ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ಗಳಿಗೆ ಸಾಲ ನೀಡಲು ಬ್ಯಾಂಕ್‌ಗಳಿಗೆ ನಂತರ ಅವಕಾಶ ನೀಡಲಾಗಿದ್ದರೂ, ಆರ್‌ಇಐಟಿಗಳಿಗೆ ಸಾಲ ನೀಡಲು ಅನುಮತಿ ಇಲ್ಲ.

ADVERTISEMENT

ರಿಯಲ್ ಎಸ್ಟೇಟ್‌ ವಲಯಕ್ಕೆ ಹಣಕಾಸಿನ ನೆರವು ನೀಡುವ ಮೂಲಕ ವಲಯಕ್ಕೆ ಮತ್ತಷ್ಟು ಉತ್ತೇಜನ ನೀಡಲು ಆರ್‌ಇಐಟಿಗಳಿಗೆ ಸಾಲ ನೀಡಲು ಯೋಜಿಸಲಾಗಿದೆ ಎಂದು ಮಲ್ಹೋತ್ರಾ ಹೇಳಿದ್ದಾರೆ. 

ದೇಶದ ಷೇರುಪೇಟೆಯಲ್ಲಿ ಒಟ್ಟು ಐದು ಆರ್‌ಇಐಟಿಗಳು ನೋಂದಾಯಿತ ಆಗಿವೆ. ಅವು ಬ್ರೂಕ್‌ಫೀಲ್ಡ್‌ ಇಂಡಿಯಾ ರಿಯಲ್ ಎಸ್ಟೇಟ್ ಟ್ರಸ್ಟ್‌, ಎಂಬಸಿ ಆಫೀಸ್ ಪಾರ್ಕ್ಸ್‌ ಆರ್‌ಇಐಟಿ, ಮೈಂಡ್‌ಸ್ಪೇಸ್‌ ಬ್ಯುಸಿನೆಸ್ ಪಾರ್ಕ್ಸ್‌ ಆರ್‌ಇಐಟಿ, ನೆಕ್ಸಸ್ ಸೆಲೆಕ್ಟ್‌ ಟ್ರಸ್ಟ್‌ ಮತ್ತು ನಾಲೆಜ್ ರಿಯಾಲ್ಟಿ ಟ್ರಸ್ಟ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.