ADVERTISEMENT

ಜಿಡಿಪಿಗೆ ರೆಕ್ಕಿಟ್ ಕೊಡುಗೆ ₹ 7,880 ಕೋಟಿ

ಪಿಟಿಐ
Published 9 ಆಗಸ್ಟ್ 2022, 14:18 IST
Last Updated 9 ಆಗಸ್ಟ್ 2022, 14:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬಹುರಾಷ್ಟ್ರೀಯ ಕಂಪನಿಯಾಗಿರುವ ರೆಕ್ಕಿಟ್‌ ಭಾರತದ ಒಟ್ಟು ಆಂತರಿಕ ಉತ್ಪಾದನೆಗೆ (ಜಿಡಿಪಿ) 2021ರಲ್ಲಿ ಅಂದಾಜು ₹ 7,880 ಕೋಟಿಯಷ್ಟು ಕೊಡುಗೆ ನೀಡಿದೆ ಎಂದು ಆಕ್ಸ್‌ಫರ್ಡ್‌ ಎಕನಾಮಿಕ್ಸ್ ವರದಿ ಅಂದಾಜು ಮಾಡಿದೆ.

ರೆಕ್ಕಿಟ್ ಪಾಲಿಗೆ ಭಾರತವು ಪ್ರಮುಖ ಮೂರು ಮಾರುಕಟ್ಟೆಗಳ ಪೈಕಿ ಒಂದು. ಡೆಟಾಲ್, ಲೈಸಾಲ್, ಹಾರ್ಪಿಕ್, ಸ್ಟ್ರೆಪ್ಸಿಲ್ಸ್ ಉತ್ಪನ್ನಗಳನ್ನು ಅದು ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ.

‘ಬೃಹತ್ ಪ್ರಮಾಣದಲ್ಲಿ ಬೆಳೆದಿರುವ ರೆಕ್ಕಿಟ್‌ನಂತಹ ಜಾಗತಿಕ ಕಂಪನಿಗಳು ದೇಶದ ಅರ್ಥ ವ್ಯವಸ್ಥೆಗೆ ನೀಡಬಹುದಾದ ಕೊಡುಗೆಯನ್ನು ನಮ್ಮ ಸಂಶೋಧನೆಯು ತೋರಿಸಿಕೊಟ್ಟಿದೆ’ ಎಂದು ಆಕ್ಸ್‌ಫರ್ಡ್‌ ಎಕನಾಮಿಕ್ಸ್‌ನ ಸಿಇಒ ಆ್ಯಡ್ರಿಯನ್ ಕೂಪರ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.