
ಬೆಂಗಳೂರು / ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಎಫ್‌ಎಂಸಿಜಿ ಅಂಗಸಂಸ್ಥೆಯಾದ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಆರ್‌ಸಿಪಿಎಲ್) ಆಸ್ಟ್ರೇಲಿಯಾದ ಪಾನೀಯ ಕಂಪನಿ ಗುಡ್‌ನೆಸ್ ಗ್ರೂಪ್ ಗ್ಲೋಬಲ್ (ಜಿಸಿಸಿ) ಪ್ರೈವೆಟ್ ಲಿಮಿಟೆಡ್‌ನ ಬಹುಪಾಲನ್ನು ಖರೀದಿಸಿದೆ.
ಈ ಒಪ್ಪಂದವು ಗುಡ್‌ನೆಸ್‌ನ ಪಾನೀಯ ಕಂಪನಿ ‘ಬೆಟರ್ ಫಾರ್ ಯು’ ಸ್ವಾಧೀನವನ್ನೂ ಸಹ ಒಳಗೊಂಡಿದೆ. ಈ ಒಪ್ಪಂದವು ಆರ್‌ಸಿಪಿಎಲ್, ಆಸ್ಟ್ರೇಲಿಯಾ ಮಾರುಕಟ್ಟೆಗೆ ಪ್ರವೇಶಿಸಲು ಮತ್ತು ಸಾಗರೋತ್ತರ ಮಾರುಕಟ್ಟೆಯಲ್ಲಿ ತನ್ನ ವಹಿವಾಟನ್ನು ವಿಸ್ತರಿಸಲು ಅನುಕೂಲ ಮಾಡಿಕೊಡಲಿದೆ.
ಈ ಪಾಲುದಾರಿಕೆಯ ಮೂಲಕ ಆರ್‌ಸಿಪಿಎಲ್, ಗುಡ್‌ನೆಸ್ ಗ್ರೂಪ್‌ನ ಪ್ರಮುಖ ಪಾನೀಯ ಬ್ರ್ಯಾಂಡ್‌ಗಳನ್ನು ಭಾರತ ಸೇರಿದಂತೆ ಹೊಸ ಮಾರುಕಟ್ಟೆಗಳಲ್ಲಿ ಲಭ್ಯವಾಗುವಂತೆ ಮಾಡಲು ಸಹಾಯ ಮಾಡುತ್ತದೆ ಎಂದು ಜಂಟಿ ಹೇಳಿಕೆ ತಿಳಿಸಿದೆ.
ಸ್ವಾಧೀನದ ಪಾಲು ಮತ್ತು ಹಣಕಾಸಿನ ವಿವರಗಳನ್ನು ಕಂಪನಿಯು ಬಹಿರಂಗಪಡಿಸಿಲ್ಲ.
‘ಈ ಪಾಲುದಾರಿಕೆಯು ಆರ್‌ಸಿಪಿಎಲ್ ಅನ್ನು ಜಾಗತಿಕ ಎಫ್ಎಂಸಿಜಿ ಕಂಪನಿಯಾಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ನೆಕ್ಸ್ಬಾ ಮತ್ತು ಪೇಸ್‌ನಂತಹ ಆರೋಗ್ಯ ಪಾನೀಯ ಬ್ರ್ಯಾಂಡ್‌ಗಳು ನಮ್ಮ ಪೋರ್ಟ್‌ಫೋಲಿಯೊವನ್ನು ಸದೃಢಗೊಳಿಸಲಿವೆ. ಜಾಗತಿಕ ಗುಣಮಟ್ಟದ ಉತ್ಪನ್ನಗಳನ್ನು ಪ್ರತಿಯೊಬ್ಬ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ತಲುಪಿಸುವುದು ನಮ್ಮ ಗುರಿಯಾಗಿದೆ’ ಎಂದು ಆರ್‌ಸಿಪಿಎಲ್ ನಿರ್ದೇಶಕ ಟಿ.ಕೃಷ್ಣಕುಮಾರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.