
ರಿಲಯನ್ಸ್
ಬೆಂಗಳೂರು: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಎಫ್ಎಂಸಿಜಿ ವಿಭಾಗ ‘ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್’ (ಆರ್‌ಸಿಪಿಎಲ್) ತಮಿಳುನಾಡಿನ ಪ್ರಮುಖ ಆಹಾರ ಕಂಪನಿ ‘ಸದರ್ನ್ ಹೆಲ್ತ್ ಫುಡ್ಸ್ ಪ್ರೈವೇಟ್ ಲಿಮಿಟೆಡ್’ಅನ್ನು ಸ್ವಾಧೀನಕ್ಕೆ ತೆಗೆದುಕೊಂಡಿದೆ.
ಸದರ್ನ್ ಹೆಲ್ತ್ ಫುಡ್ಸ್ ಕಂಪನಿಯು ತನ್ನ ‘ಮನ್ನಾ’ ಬ್ರ್ಯಾಂಡ್ ಮೂಲಕ ಹೆಸರುವಾಸಿಯಾಗಿದೆ ಎಂದು ರಿಲಯನ್ಸ್‌ನ ಪ್ರಕಟಣೆ ಹೇಳಿದೆ. ಈ ಕಂಪನಿಯು ಕಳೆದ ಎರಡು ದಶಕಗಳಿಂದ ಆರೋಗ್ಯಕರ ಮತ್ತು ಪೌಷ್ಟಿಕವಾದ ಆಹಾರ ಉತ್ಪನ್ನಗಳನ್ನು ತಯಾರಿಸುತ್ತಿದೆ ಎಂದು ತಿಳಿಸಿದೆ.
ಈ ಸ್ವಾಧೀನದ ನಂತರ ಸಿರಿಧಾನ್ಯ ಆಧಾರಿತ ಮತ್ತು ಆರೋಗ್ಯ ಆಹಾರ ವಿಭಾಗದಲ್ಲಿ ರಿಲಯನ್ಸ್‌ನ ಪಾಲು ಹೆಚ್ಚಾಗಿದೆ.
ಆರ್‌ಸಿಪಿಎಲ್ ನಿರ್ದೇಶಕ ಟಿ.ಕೃಷ್ಣಕುಮಾರ್ ಅವರು ‘ಮನ್ನಾ ಬ್ರ್ಯಾಂಡ್ ತಮಿಳುನಾಡು ಮತ್ತು ನೆರೆಯ ರಾಜ್ಯಗಳಲ್ಲಿ ವಿಶ್ವಾಸಾರ್ಹ ಆರೋಗ್ಯ ಆಹಾರ ಬ್ರ್ಯಾಂಡ್ ಆಗಿದೆ. ರಿಲಯನ್ಸ್‌ನ ಬಲವಾದ ವಿತರಣೆ ಮತ್ತು ಪೂರೈಕೆ ಜಾಲದ ಮೂಲಕ ಈ ಬ್ರ್ಯಾಂಡ್‌ನ ಪೌಷ್ಟಿಕ ಉತ್ಪನ್ನಗಳನ್ನು ದೇಶದ ಇತರ ಭಾಗಗಳಲ್ಲಿಯೂ ಲಭ್ಯವಾಗುವಂತೆ ಮಾಡಲಾಗುವುದು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.