ADVERTISEMENT

ರಿಲಯನ್ಸ್: ಡಿಜಿಟಲ್‌ ಮಾರಾಟ ಮೇಳ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 18:42 IST
Last Updated 12 ಆಗಸ್ಟ್ 2020, 18:42 IST
ರಿಲಯನ್ಸ್
ರಿಲಯನ್ಸ್   

ಬೆಂಗಳೂರು: ರಿಲಯನ್ಸ್ ಡಿಜಿಟಲ್‌ ನಡೆಸುತ್ತಿರುವ ‘ಡಿಜಿಟಲ್ ಇಂಡಿಯಾ ಸೇಲ್’ ವ್ಯಾಪಾರ ಉತ್ಸವವನ್ನು ಆಗಸ್ಟ್‌ 16ರವರೆಗೆ ವಿಸ್ತರಿಸಲಾಗಿದೆ. ಈ ಮಾರಾಟ ಮೇಳದಲ್ಲಿ ಗ್ರಾಹಕರು ಶೇಕಡ 15ರವರೆಗೆ ವಿನಾಯಿತಿ ಪಡೆಯಬಹುದು ಎಂದು ರಿಲಯನ್ಸ್ ಡಿಜಿಟಲ್‌ ಹೇಳಿದೆ.

ಈ ಕೊಡುಗೆಯು ರಿಲಯನ್ಸ್ ಡಿಜಿಟಲ್‌ ಅಂಗಡಿಗಳಲ್ಲಿ, ಮೈಜಿಯೊ ಸ್ಟೋರ್‌ನಲ್ಲಿ ಹಾಗೂwww.reliancedigital.inನಲ್ಲಿ ಲಭ್ಯ. ಟಿ.ವಿ., ಗೃಹ ಬಳಕೆಯ ಉತ್ಪನ್ನಗಳು, ಮೊಬೈಲ್‌ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಸೇರಿದಂತೆ ಹಲವು ಉತ್ಪನ್ನಗಳಿಗೆ ಈ ಕೊಡುಗೆ ಅನ್ವಯ ಆಗುತ್ತದೆ.

ರಿಲಯನ್ಸ್ ಡಿಜಿಟಲ್ ಅಂಗಡಿಗಳಲ್ಲಿ ಗ್ರಾಹಕರ ಸುರಕ್ಷತೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.