ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ₹26,994 ಕೋಟಿ ಲಾಭ ಗಳಿಸಿದೆ.
ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹15,138 ಕೋಟಿ ಲಾಭ ಗಳಿಸಿತ್ತು. ಈ ಲಾಭಕ್ಕೆ ಹೋಲಿಸಿದರೆ ಶೇ 78ರಷ್ಟು ಏರಿಕೆಯಾಗಿದೆ. ಗ್ರಾಹಕ ವಹಿವಾಟಿನಲ್ಲಿ ಹೆಚ್ಚಳದಿಂದಾಗಿ ಲಾಭದ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಕಂಪನಿ ಶುಕ್ರವಾರ ಷೇರುಪೇಟೆಗೆ ತಿಳಿಸಿದೆ.
ವರಮಾನವು ಶೇ 5ರಷ್ಟು ಹೆಚ್ಚಳವಾಗಿದ್ದು, ₹2.48 ಲಕ್ಷ ಕೋಟಿಯಾಗಿದೆ ಎಂದು ತಿಳಿಸಿದೆ.
ಲಾಭ ಹೆಚ್ಚಳ: ರಿಲಯನ್ಸ್ ಸಮೂಹದ ರಿಲಯನ್ಸ್ ರಿಟೇಲ್ ವೆಂಚರ್ ಲಿಮಿಟೆಡ್ (ಆರ್‌ಆರ್‌ವಿಎಲ್) ಜೂನ್ ತ್ರೈಮಾಸಿಕದ ತೆರಿಗೆ ನಂತರದ ಲಾಭದ (ಪಿಎಟಿ) ಪ್ರಮಾಣದಲ್ಲಿ ಶೇ 28ರಷ್ಟು ಹೆಚ್ಚಳವಾಗಿದ್ದು, ₹3,271 ಕೋಟಿ ಗಳಿಸಿದೆ. ವರಮಾನದಲ್ಲಿ ಶೇ 11ರಷ್ಟು ಏರಿಕೆಯಾಗಿದ್ದು, ₹84,171 ಕೋಟಿ ಆಗಿದೆ ಎಂದು ತಿಳಿಸಿದೆ.
ಜಿಯೊ ಲಾಭ ಏರಿಕೆ: ಜೂನ್ ತ್ರೈಮಾಸಿಕದಲ್ಲಿ ಜಿಯೊ ಕಂಪನಿಯು ₹7,110 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 25ರಷ್ಟು ಅಧಿಕ. ವರಮಾನವು ಶೇ 19ರಷ್ಟು ಹೆಚ್ಚಳವಾಗಿದ್ದು, ₹41,054 ಕೋಟಿಯಾಗಿದೆ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.