ADVERTISEMENT

ಕರಕುಶಲ ಉತ್ಪನ್ನಗಳಿಗಾಗಿ ರಿಲಯನ್ಸ್‌ನಿಂದ ಸ್ವದೇಶ್ ಮಳಿಗೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 16:12 IST
Last Updated 21 ಏಪ್ರಿಲ್ 2022, 16:12 IST
   

ಬೆಂಗಳೂರು: ರಿಲಯನ್ಸ್ ರಿಟೇಲ್‌ ಕಂಪನಿಯು ‘ಸ್ವದೇಶ್‌ ಸ್ಟೋರ್‌’ಗಳನ್ನು ಆರಂಭಿಸಲಿದ್ದು, ಭಾರತೀಯ ಕುಶಲಕರ್ಮಿಗಳು ಸಿದ್ಧಪಡಿಸುವ ಉತ್ಪನ್ನಗಳಿಗೆ ಇದು ಜಾಗತಿಕ ಮಾರಾಟ ವೇದಿಕೆಯಾಗಿ ಕೆಲಸ ಮಾಡಲಿದೆ.

ಈ ವರ್ಷದ ದ್ವಿತೀಯಾರ್ಧದಲ್ಲಿ ಮೊದಲ ಸ್ವದೇಶ್‌ ಮಳಿಗೆ ಆರಂಭವಾಗುವ ನಿರೀಕ್ಷೆಯಿದೆ. ಇದರಲ್ಲಿ ಕರಕುಶಲ ಉಡುಪುಗಳು, ಕೈಮಗ್ಗದ ಉತ್ಪನ್ನಗಳು, ಕೃಷಿ ಉತ್ಪನ್ನಗಳು ಮತ್ತು ಇತರ ಕೆಲವು ಉತ್ಪನ್ನಗಳು ದೊರೆಯಲಿವೆ. ಇವುಗಳನ್ನು ನೇರವಾಗಿ ಕಲಾವಿದರಿಂದಲೇ ಖರೀದಿಸಲಾಗುತ್ತದೆ. ವಿಶ್ವದ ಎಲ್ಲೆಡೆಯ ಗ್ರಾಹಕರು ಈ ಉತ್ಪನ್ನಗಳನ್ನು ಖರೀದಿಸಲು ಅವಕಾಶ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.

‘ಭಾರತೀಯ ಕರಕುಶಲ ಉತ್ಪನ್ನಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿದೆ. ನಮ್ಮ ವಿಶೇಷ ಸ್ಟೋರ್ ಆಗಿರುವ ಸ್ವದೇಶ್‌ ಈಗ ಅಂತಿಮ ರೂಪ ಪಡೆದುಕೊಂಡಿದೆ’ ಎಂದು ರಿಲಯನ್ಸ್‌ ರಿಟೇಲ್‌ ವೆಂಚರ್ಸ್‌ ಲಿಮಿಟೆಡ್‌ ನಿರ್ದೇಶಕಿ ಇಶಾ ಅಂಬಾನಿ ಹೇಳಿದ್ದಾರೆ.

ADVERTISEMENT

ರಾಜ್ಯ ಸರ್ಕಾರಗಳ ಜೊತೆಗೆ ಸ್ವದೇಶ್‌ ಒಪ್ಪಂದ ಮಾಡಿಕೊಳ್ಳುತ್ತಿದೆ. ಜವಳಿ ಸಚಿವಾಲಯದ ಜೊತೆಗೆ ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇದರ ಅಡಿಯಲ್ಲಿ ಕರಕುಶಲ ಕರ್ಮಿಗಳಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿ ಮಾಡಲಾಗುತ್ತದೆ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.