ADVERTISEMENT

ಮೊಬೈಲ್‌ ಡೌನ್‌ಲೋಡ್‌ ವೇಗ: 42ನೇ ಸ್ಥಾನಕ್ಕೆ ಜಿಗಿದ ಭಾರತ

ಪಿಟಿಐ
Published 2 ಅಕ್ಟೋಬರ್ 2023, 15:33 IST
Last Updated 2 ಅಕ್ಟೋಬರ್ 2023, 15:33 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: 5ಜಿ ಸೇವೆಗಳು ಆರಂಭ ಆದ ಬಳಿಕ ಭಾರತದಲ್ಲಿ ಮೊಬೈಲ್‌ ಡೌನ್‌ಲೋಡ್‌ ವೇಗವು ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ‘ಸ್ಪೀಡೆಸ್ಟ್‌ ಗ್ಲೋಬಲ್‌ ಇಂಡೆಕ್ಸ್‌’ನಲ್ಲಿ ಭಾರತವು 119ನೇ ಸ್ಥಾನದಿಂದ 42ನೇ ಸ್ಥಾನಕ್ಕೆ ಏರಿಕೆ ಕಂಡಿದೆ ಎಂದು ಓಕ್ಲಾ ಕಂಪನಿಯು ಹೇಳಿದೆ.

ಭಾರತದಲ್ಲಿ 5ಜಿ ಬಳಕೆಗೆ ಬಂದ ಬಳಿಕ ಮೊಬೈಲ್‌ ಡೌನ್‌ಲೋಡ್‌ ವೇಗವು 3.59 ಪಟ್ಟು ಏರಿಕೆ ಆಗಿದೆ. 2022ರ ಸೆಪ್ಟೆಂಬರ್‌ನಲ್ಲಿ 13.87 ಎಂಬಿಪಿಎಸ್‌ ಇದ್ದ ಡೌನ್‌ಲೋಡ್‌ ವೇಗವು 2023ರ ಆಗಸ್ಟ್‌ನಲ್ಲಿ 50.21 ಎಂಬಿಪಿಎಸ್‌ಗೆ ಏರಿದೆ ಎಂದು ಅದು ತಿಳಿಸಿದೆ. speedtest.net ಮೂಲಕ ಮೊಬೈಲ್‌ ಇಂಟರ್ನೆಟ್‌ ವೇಗದ ಮಾಹಿತಿ ನೀಡುವ ಮತ್ತು ಇಂಟರ್ನೆಟ್‌ ಬಳಕೆಗೆ ಸಂಬಂದಿಸಿದಂತೆ ಉಚಿತವಾಗಿ ವಿಶ್ಲೇಷಣೆಗಳನ್ನು ನೀಡುವ ಕಂಪನಿ ಇದಾಗಿದೆ.

ADVERTISEMENT

ಮೊಬೈಲ್‌ ಡೌನ್‌ಲೋಡ್ ವೇಗದಲ್ಲಿ ನೆರೆಯ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಪಾಕಿಸ್ತಾನವನ್ನಷ್ಟೇ ಅಲ್ಲದೆ, ಮೆಕ್ಸಿಕೊ (90) ಟರ್ಕಿ (68), ಬ್ರಿಟನ್‌ (62), ಜಪಾನ್‌ (58), ಬ್ರೆಜಿಲ್ (50) ಮತ್ತು ದಕ್ಷಿಣ ಆಫ್ರಿಕಾ (48) ದೇಶಗಳನ್ನು ಸಹ ಭಾರತ ಹಿಂದಿಕ್ಕಿದೆ ಎಂದು ತಿಳಿಸಿದೆ.

ರಿಲಯನ್ಸ್ ಜಿಯೊ ಮತ್ತು ಭಾರ್ತಿ ಏರ್‌ಟೆಲ್‌ ಕಂಪನಿಗಳು 5ಜಿ ಸೇವೆಗಳಿಗೆ ಚಾಲನೆ ನೀಡಿದ್ದು, 5ಜಿ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಫೈಬರ್‌ ಮೂಲಕ ಬ್ರಾಡ್‌ಬ್ಯಾಂಡ್‌ ಸಂರ್ಪಕ ಕಲ್ಪಿಸುವುದು ದುಬಾರಿ ಅಥವಾ ಅಸಾಧ್ಯ ಇರುವ ಸ್ಥಳಗಳಲ್ಲಿ 5ಜಿ ಫಿಕ್ಸೆಡ್‌ ವೈರ್‌ಲೆಸ್‌ ಅಕ್ಸೆಸ್ (ಎಫ್‌ಡಬ್ಲ್ಯುಎ) ಸೇವೆಗಳನ್ನು ಆರಂಭಿಸಲಾಗಿದೆ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.