ADVERTISEMENT

ನವೀಕರಿಸಬಹುದಾದ ಇಂಧನ ಸಾಧನಗಳ ತೆರಿಗೆ ಕಡಿತ: ಶುದ್ಧ ಇಂಧನ ಕೇಂದ್ರ ಸ್ಥಾಪನೆ ಅಗ್ಗ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 10:45 IST
Last Updated 4 ಸೆಪ್ಟೆಂಬರ್ 2025, 10:45 IST
   

ನವದೆಹಲಿ: ನವೀಕರಿಸಬಹುದಾದ ಇಂಧನದ ಸಾಧನಗಳ ಮೇಲಿನ ತೆರಿಗೆ ಕಡಿಮೆ ಮಾಡಿರುವುದರಿಂದ ಶುದ್ಧ ಇಂಧನ ಯೋಜನೆಗಳ ಉಪಕರಣಗಳು ಅಗ್ಗವಾಗುವ ಸಾಧ್ಯತೆ ಇದೆ

ಹಸಿರು ವಿದ್ಯುತ್ ಯೋಜನೆಗಳನ್ನು ಉತ್ತೇಜಿಸಲು ನವೀಕರಿಸಬಹುದಾದ ಇಂಧನ ಸಾಧನಗಳು ಮತ್ತು ಬಿಡಿಭಾಗಗಳ ಮೇಲಿನ ಜಿಎಸ್‌ಟಿ ದರವನ್ನು ಶೇ 12 ರಿಂದ 5ಕ್ಕೆ ಇಳಿಸಿರುವುದರಿಂದ ಶುದ್ಧ ಇಂಧನ ಯೋಜನೆಗಳ ಉಪಕರಣಗಳು ಅಗ್ಗವಾಗುವ ಸಾಧ್ಯತೆಯಿದೆ.

ಬುಧವಾರ ನಡೆದ ತನ್ನ 56ನೇ ಸಭೆಯಲ್ಲಿ, ಇಂಧನ ಕೋಶ ತಂತ್ರಜ್ಞಾನವನ್ನು ಆಧರಿಸಿದ ಹೈಡ್ರೋಜನ್ ವಾಹನಗಳು ಸೇರಿದಂತೆ ಇಂಧನ ಕೋಶ ಮೋಟಾರು ವಾಹನಗಳು, ಜೊತೆಗೆ ಸೌರಶಕ್ತಿಯ ಉಪಕರಣಗಳು ಮತ್ತು ವ್ಯವಸ್ಥೆಗಳ ಮೇಲಿನ ಸುಂಕವನ್ನು ಶೇ 12 ರಿಂದ 5ಕ್ಕೆ ಇಳಿಸಲು ಜಿಎಸ್‌ಟಿ ಕೌನ್ಸಿಲ್ ಶಿಫಾರಸು ಮಾಡಿದೆ.

ADVERTISEMENT

ಹಣಕಾಸು ಸಚಿವಾಲಯ ಹೊರಡಿಸಿದ ಪ್ರಕಟಣೆ ಪ್ರಕಾರ, ನವೀಕರಿಸಬಹುದಾದ ಇಂಧನ ಸರಕುಗಳನ್ನು ಉತ್ತೇಜಿಸುವುದು ಅಂತಹ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡುವ ಉದ್ದೇಶವಾಗಿದೆ.

ಹೊಸ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರವು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ.

ಇದಲ್ಲದೆ, ಜೈವಿಕ ಅನಿಲ ಸ್ಥಾವರ, ತ್ಯಾಜ್ಯದಿಂದ ಇಂಧನ ಸ್ಥಾವರಗಳು/ಸಾಧನಗಳು, ಸೌರ ಲ್ಯಾಂಟರ್ನ್/ಸೌರ ದೀಪ, ಸಾಗರ ಅಲೆಗಳು/ಉಬ್ಬರವಿಳಿತದ ಅಲೆಗಳ ಶಕ್ತಿ ಸಾಧನಗಳು/ಸ್ಥಾವರಗಳ ಮೇಲಿನ ಸುಂಕವನ್ನು ಕಡಿಮೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.