ADVERTISEMENT

ತುಸು ತಗ್ಗಿದ ಹಣದುಬ್ಬರ

ಅನ್ನಪೂರ್ಣ ಸಿಂಗ್
Published 12 ಜುಲೈ 2021, 15:33 IST
Last Updated 12 ಜುಲೈ 2021, 15:33 IST

ನವದೆಹಲಿ: ಜೂನ್‌ ತಿಂಗಳಲ್ಲಿ ದೇಶದಲ್ಲಿನ ಚಿಲ್ಲರೆ ಹಣದುಬ್ಬರ ಪ್ರಮಾಣವು ಅತ್ಯಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಹೀಗಿದ್ದರೂ, ಇದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿಗದಿ ಮಾಡಿಕೊಂಡಿರುವ ಮಿತಿಗಿಂತಲೂ ಹೆಚ್ಚು.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣವು ಜೂನ್‌ನಲ್ಲಿ ಶೇಕಡ 6.26ಕ್ಕೆ ಇಳಿಕೆ ಆಗಿದೆ. ಇದು ಮೇ ತಿಂಗಳಲ್ಲಿ ಶೇ 6.30ರಷ್ಟು ಇತ್ತು. ಚಿಲ್ಲರೆ ಹಣದುಬ್ಬರ ಪ್ರಮಾಣವು ಒಟ್ಟಾರೆಯಾಗಿ ಕಡಿಮೆ ಆಗಿದ್ದರೂ, ಆಹಾರ ವಸ್ತುಗಳ ಹಣದುಬ್ಬರ ಏರಿಕೆ ಆಗಿದೆ. ಮೇ ತಿಂಗಳಲ್ಲಿ ಶೇ 5ರಷ್ಟು ಇದ್ದ ಆಹಾರ ವಸ್ತುಗಳ ಹಣದುಬ್ಬರವು ಜೂನ್‌ನಲ್ಲಿ ಶೇ 5.15ಕ್ಕೆ ಹೆಚ್ಚಳವಾಗಿದೆ. ಖಾದ್ಯ ತೈಲ, ಮೊಟ್ಟೆ, ಹಣ್ಣು, ಧಾನ್ಯಗಳ ಬೆಲೆಯಲ್ಲಿ ಏರಿಕೆ ಆಗಿದೆ.

ಮೇ ತಿಂಗಳಿನಲ್ಲಿ ಕೈಗಾರಿಕಾ ಉತ್ಪಾದನೆಯು ಶೇಕಡ 29.3ರಷ್ಟು ಹೆಚ್ಚಳವಾಗಿದೆ. 2020ರ ಮೇ ತಿಂಗಳಿನಲ್ಲಿ ಕೈಗಾರಿಕಾ ಉತ್ಪಾದನೆಯು ಶೇ (–)33ಕ್ಕೆ ಕುಸಿದಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.