ADVERTISEMENT

ಚಿಲ್ಲರೆ ಹಣದುಬ್ಬರ ಏರಿಕೆ: ಜುಲೈನಲ್ಲಿ ಶೇ 6.93

ಪಿಟಿಐ
Published 13 ಆಗಸ್ಟ್ 2020, 15:08 IST
Last Updated 13 ಆಗಸ್ಟ್ 2020, 15:08 IST
ಚಿಲ್ಲರೆ ಹಣದುಬ್ಬರ– ಸಾಂದರ್ಭಿಕ ಚಿತ್ರ
ಚಿಲ್ಲರೆ ಹಣದುಬ್ಬರ– ಸಾಂದರ್ಭಿಕ ಚಿತ್ರ   

ನವದೆಹಲಿ: ಆಹಾರ ಉತ್ಪನ್ನಗಳ ದರ ಗರಿಷ್ಠ ಮಟ್ಟದಲ್ಲಿ ಇರುವ ಕಾರಣ, ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇಕಡ 6.93ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.

ಜೂನ್‌ನಲ್ಲಿ ಇದು ಶೇ 6.23ರಷ್ಟಿತ್ತು. ಜುಲೈನ ಪ್ರಮಾಣಕ್ಕೆ ಹೋಲಿಸಿದರೆ ಶೇ 0.7ರಷ್ಟು ಹೆಚ್ಚಳವಾಗಿದೆ. ಗ್ರಾಹಕರ ದರ ಸೂಚ್ಯಂಕ (ಸಿಪಿಐ) ಆಧರಿಸಿದ ಆಹಾರ ಹಣದುಬ್ಬರ ಶೇ 8.72ರಿಂದ ಶೇ 9.62ಕ್ಕೆ ಏರಿಕೆಯಾಗಿದೆ.

ಸತತ ಎರಡನೇ ತಿಂಗಳಿನಲ್ಲಿಯೂ ಚಿಲ್ಲರೆ ಹಣದುಬ್ಬರವು ಆರ್‌ಬಿಐ ನಿಗದಿ ಮಾಡಿಕೊಂಡಿರುವ ‘ಹಿತಕರ ಮಟ್ಟ’ಕ್ಕಿಂತಲೂ ಮೇಲಕ್ಕೆ ಜಿಗಿದಿದೆ. ಚಿಲ್ಲರೆ ಹಣದುಬ್ಬರವನ್ನು ಶೇ 4ಕ್ಕೆ (2 ಅಂಶ ಹೆಚ್ಚು ಅಥವಾ ಕಡಿಮೆ) ನಿಯಂತ್ರಿಸಬೇಕು ಎನ್ನುವುದು ಕೇಂದ್ರ ಸರ್ಕಾರವು ಆರ್‌ಬಿಐಗೆ ನೀಡಿರುವ ಸೂಚನೆ.

ADVERTISEMENT

ಆರ್‌ಬಿಐ ಬಡ್ಡಿದರ ಪರಾಮರ್ಶೆ ಮಾಡುವಾಗ ಚಿಲ್ಲರೆ ಹಣದುಬ್ಬರವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಆದರೆ, ಇದೀಗ ಜುಲೈನಲ್ಲಿಯೂ ಚಿಲ್ಲರೆ ಹಣದುಬ್ಬರ ಶೇ 9.62ಕ್ಕೆ ಏರಿಕೆಯಾಗಿರುವುದರಿಂದ ಮುಂದಿನ ಹಣಕಾಸು ನೀತಿಯಲ್ಲಿ ಬಡ್ಡಿದರ ಕಡಿತದ ಸಾಧ್ಯತೆ ಕಡಿಮೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.