ADVERTISEMENT

₹ 19 ಲಕ್ಷ ಕೋಟಿಯ ಸಮೀಪಕ್ಕೆ ರಿಲಯನ್ಸ್‌ ಮಾರುಕಟ್ಟೆ ಮೌಲ್ಯ

ಪಿಟಿಐ
Published 21 ಏಪ್ರಿಲ್ 2022, 12:56 IST
Last Updated 21 ಏಪ್ರಿಲ್ 2022, 12:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ (ಆರ್‌ಐಎಲ್‌) ಷೇರುಗಳು ಸತತ ಮೂರನೇ ದಿನವೂ ಗಳಿಕೆ ಕಂಡವು. ಗುರುವಾರ ಶೇಕಡ 2ಕ್ಕೂ ಹೆಚ್ಚು ಪ್ರಮಾಣದಲ್ಲಿ ಏರಿಕೆ ಕಂಡಿತು. ಇದರಿಂದಾಗಿ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು ₹ 19 ಲಕ್ಷ ಕೋಟಿಯ ಸಮೀಪಕ್ಕೆ ತಲುಪಿದೆ.

ಬಿಎಸ್‌ಇನಲ್ಲಿ ಕಂಪನಿಯ ಷೇರು ಮೌಲ್ಯ ಶೇ 2.35ರಷ್ಟು ಹೆಚ್ಚಾಗಿ ಪ್ರತಿ ಷೇರಿನ ಬೆಲೆ ₹ 2,782ಕ್ಕೆ ತಲುಪಿತು. ಮೂರು ದಿನಗಳ ವಹಿವಾಟಿನಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯ ₹ 1.60 ಲಕ್ಷ ಕೋಟಿಯಷ್ಟು ಹೆಚ್ಚಾಗಿದ್ದು ಒಟ್ಟಾರೆ ಮಾರುಕಟ್ಟೆ ಮೌಲ್ಯವು ₹ 18.82 ಲಕ್ಷ ಕೋಟಿಗೆ ಏರಿದೆ.

ಸಕಾರಾತ್ಮಕ ಓಟ: ರಿಲಯನ್ಸ್ ಇಂಡಸ್ಟ್ರೀಸ್‌, ಇನ್ಫೊಸಿಸ್‌ ಮತ್ತು ಎಚ್‌ಡಿಎಫ್‌ಸಿ ಷೇರುಗಳು ಹೂಡಿಕೆದಾರರನ್ನು ಆಕರ್ಷಿಸಿದ್ದರಿಂದ ದೇಶದ ಷೇರುಪೇಟೆಗಳಲ್ಲಿ ಸತತ ಎರಡನೇ ದಿನವೂ ಸಕಾರಾತ್ಮಕ ವಹಿವಾಟು ಮುಂದುವರಿಯಿತು.

ADVERTISEMENT

ಪ್ರಮುಖ ಕಂಪನಿಗಳ ಜೊತೆಗೆ ಕೆಲವು ಮಧ್ಯಮ ಮತ್ತು ಸಣ್ಣ ಗಾತ್ರದ ಕಂಪನಿಗಳ, ಕಡಿಮೆ ಮೌಲ್ಯಕ್ಕೆ ಸಿಗುತ್ತಿದ್ದ ಷೇರುಗಳನ್ನು ಹೂಡಿಕೆದಾರರು ಖರೀದಿ ಮಾಡಿದ್ದರಿಂದ ಸೂಚ್ಯಂಕಗಳು ಏರಿಕೆ ಕಂಡವು ಎಂದು ವರ್ತಕರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 874 ಅಂಶ ಏರಿಕೆ ಕಂಡು 57,912 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 256 ಅಂಶ ಹೆಚ್ಚಾಗಿ 17,392 ಅಂಶಗಳಿಗೆ ತಲುಪಿತು.

ಬ್ರೆಂಟ್ ಕಚ್ಚಾತೈಲ ದರ ಶೇ 1.40ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 108.3 ಡಾಲರ್‌ಗಳಿಗೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.