ನವದೆಹಲಿ: ‘ಇತ್ತೀಚೆಗೆ ವಿಲೀನಗೊಂಡಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ (ಆರ್‌ಆರ್‌ಬಿ) ಐ.ಟಿ ಸಂಯೋಜನೆ ಪ್ರಕ್ರಿಯೆ ಸೆಪ್ಟೆಂಬರ್ 15ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ (ನಬಾರ್ಡ್) ಅಧ್ಯಕ್ಷ ಶಾಜಿ ಕೆ.ವಿ ಹೇಳಿದ್ದಾರೆ.
‘ಒಂದು ರಾಜ್ಯ, ಒಂದು ಆರ್‌ಆರ್‌ಬಿ’ ತತ್ವದ ಅಡಿ ಮೇ 1ರಂದು ಬ್ಯಾಂಕ್‌ಗಳು ವಿಲೀನಗೊಂಡವು. ಬ್ಯಾಂಕ್‌ಗಳ ಪರಿಣಾಮಕಾರಿ ಕಾರ್ಯಾಚರಣೆ ಮತ್ತು ವೆಚ್ಚ ಕಡಿತಗೊಳಿಸುವುದು ಇದರ ಮುಖ್ಯ ಉದ್ದೇಶ. ಪ್ರಸ್ತುತ 26 ರಾಜ್ಯ ಮತ್ತು ಎರಡು ಕೇಂದ್ರಡಾಳಿತ ಪ್ರದೇಶದಲ್ಲಿ ಒಟ್ಟು 28 ಆರ್‌ಆರ್‌ಬಿಗಳಿದ್ದು, 22 ಸಾವಿರಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ.
ಆರ್‌ಆರ್‌ಬಿ ಜೊತೆ ನಬಾರ್ಡ್ ಡಿಜಿಟಲ್ ಮೂಲಸೌಕರ್ಯ ನಿರ್ಮಾಣದ ಕಾರ್ಯನಿರ್ವಹಿಸುತ್ತಿದೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸೋಮವಾರ ಹೇಳಿದ್ದಾರೆ. ಇಂಟರ್‌ನೆಟ್ ವೇಗ ಕಡಿಮೆ ಇರುವುದು ಮತ್ತು ಅರಿವಿನ ಕೊರತೆ ಪ್ರಮುಖ ಸವಾಲುಗಳಾಗಿವೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.