
ಮುಂಬೈ: ಗುರುವಾರದ ಆರಂಭಿಕ ವಿದೇಶಿ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ದಾಖಲೆಯ 12 ಪೈಸೆಯಷ್ಟು ಕುಸಿದಿದ್ದು, ಸಾರ್ವಕಾಲಿಕ ಕನಿಷ್ಠ ಮಟ್ಟ ₹85.06ಕ್ಕೆ ತಲುಪಿದೆ.
ಅಮೆರಿಕದ ಫೆಡರಲ್ ರಿಸರ್ವ್ 2025ಕ್ಕೆ ತನ್ನ ಪ್ರಕ್ಷೇಪಗಳನ್ನು ಸರಿಹೊಂದಿಸಿದೆ. ಇದು ಹೆಚ್ಚು ಎಚ್ಚರಿಕೆಯ ವಿತ್ತೀಯ ನೀತಿ ನಿಲುವನ್ನು ಸಂಕೇತಿಸುತ್ತದೆ. ಇದು ಭಾರತದ ರೂಪಾಯಿ ಸೇರಿದಂತೆ ಇತರೆ ಕರೆನ್ಸಿಗಳ ಮೇಲೆ ಒತ್ತಡ ಹೇರುತ್ತಿದೆ ಎಂದು ವಿದೇಶಿ ವಿನಿಮಯ ವ್ಯಾಪಾರಿಗಳು ಹೇಳಿದ್ದಾರೆ.
ಅಂತರ್‌ಬ್ಯಾಂಕ್ ವಿದೇಶಿ ವಿನಿಮಯದಲ್ಲಿ ರೂಪಾಯಿ ಮೌಲ್ಯ ಕುಸಿತದೊಂದಿಗೆ ವಹಿವಾಟು ಆರಂಭವಾಯಿತು. ನಿರ್ಣಾಯಕ ₹85 ಹಂತವನ್ನು ಮೀರಿತು.
ಆಮದುದಾರರಿಂದ ಡಾಲರ್‌ಗೆ ಬೇಡಿಕೆ, ವಿದೇಶಿ ನಿಧಿಯ ಹೊರಹರಿವು ಮತ್ತು ದೇಶೀಯ ಷೇರುಗಳಲ್ಲಿನ ಮ್ಯೂಟ್ ಟ್ರೆಂಡ್ ಹೂಡಿಕೆದಾರರ ಆಸಕ್ತಿಯನ್ನು ಮತ್ತಷ್ಟು ಕುಗ್ಗಿಸಿದ ಕಾರಣ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟ ₹85.06ಕ್ಕೆ ಕುಸಿದಿದೆ.
ಬುಧವಾರ 3 ಪೈಸೆಯಷ್ಟು ಕುಸಿದಿದ್ದ ರೂಪಾಯಿ ಮೌಲ್ಯ ಆಗಲೂ ಸಾರ್ವಕಾಲಿಕ ದಾಖಲೆ ಮಟ್ಟ ₹84.94ರಲ್ಲಿ ವಹಿವಾಟು ಮುಗಿಸಿತ್ತು.
ಅಮೆರಿಕದ ಫೆಡರಲ್ ರಿಸರ್ವ್ 25 ಮೂಲಾಂಶದಷ್ಟು ಬಡ್ಡಿ ಕಡಿತ ಮಾಡಿದೆ. 2025ಕ್ಕೆ 50 ಮೂಲಾಂಶ ಮತ್ತು 2026ಕ್ಕೆ ಮತ್ತೆ 50 ಮೂಲಾಂಶ ಕಡಿತದ ನಿರೀಕ್ಷೆ ಇದೆ.
-------------------------------------
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.