ಮುಂಬೈ (ಪಿಟಿಐ): ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯು ರೂಪಾಯಿ ಮೌಲ್ಯದ ಮೇಲೂ ಪರಿಣಾಮ ಬೀರಿದೆ. ಬುಧವಾರದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು 45 ಪೈಸೆ ಇಳಿಕೆಯಾಗಿದೆ. ಪ್ರತೀ ಡಾಲರ್ ಮೌಲ್ಯ ₹84.80 ಆಗಿದೆ.
ಭಾರತವು ಉಗ್ರರ ಮೇಲೆ ನಡೆಸಿರುವ ದಾಳಿಯಿಂದಾಗಿ ರೂಪಾಯಿ ಮೌಲ್ಯ ಇಳಿಕೆ ಕಂಡಿದೆ ಎಂದು ಕರೆನ್ಸಿ ವಿನಿಮಯ ಪೇಟೆ ತಜ್ಞರು ತಿಳಿಸಿದ್ದಾರೆ.
ಆರಂಭಿಕ ವಹಿವಾಟಿನಲ್ಲಿ ₹84.65 ಇದ್ದ ರೂಪಾಯಿ ಮೌಲ್ಯವು 45 ಪೈಸೆ ಕುಸಿಯಿತು. ಮಂಗಳವಾರದ ವಹಿವಾಟಿನಲ್ಲೂ 5 ಪೈಸೆ ಇಳಿಕೆ ಕಂಡಿತ್ತು.
‘ಅಮೆರಿಕದ ಡಾಲರ್ ಮೌಲ್ಯ ಇಳಿಕೆ ಕಂಡಿದೆ. ದೇಶೀಯ ಹಾಗೂ ಜಾಗತಿಕ ಷೇರುಪೇಟೆಗಳು ಏರಿಕೆ ಕಂಡಿವೆ. ದೇಶದ ಷೇರುಪೇಟೆಗೆ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಿದೆ. ಈ ಅಂಶಗಳು ರೂಪಾಯಿಗೆ ಬಲ ನೀಡುವ ನಿರೀಕ್ಷೆಯಿದೆ’ ಎಂದು ತಜ್ಞರು ಹೇಳಿದ್ದಾರೆ.
ಆದರೆ, ಭಾರತ ಮತ್ತು ಪಾಕಿಸ್ತಾನದ ನಡುವೆ ತಲೆದೋರಿರುವ ಬಿಕ್ಕಟ್ಟು ಹಾಗೂ ಕಚ್ಚಾ ತೈಲದ ಬೆಲೆ ಏರಿಕೆಯು ಅಲ್ಪ ಪ್ರಮಾಣದಲ್ಲಿ ರೂಪಾಯಿ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.