ADVERTISEMENT

ರೂಪಾಯಿ ಮೌಲ್ಯ 61 ಪೈಸೆ ಏರಿಕೆ

ಪಿಟಿಐ
Published 11 ಏಪ್ರಿಲ್ 2025, 13:39 IST
Last Updated 11 ಏಪ್ರಿಲ್ 2025, 13:39 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ದೇಶೀಯ ಷೇರುಪೇಟೆ ಏರಿಕೆಯು ರೂಪಾಯಿಗೆ ಬಲ ನೀಡಿದ್ದು, ಶುಕ್ರವಾರ ನಡೆದ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು 61 ಪೈಸೆ ಏರಿಕೆ ಕಂಡಿದೆ. 

ಪ್ರತೀ ಡಾಲರ್ ಮೌಲ್ಯ ₹86.07 ಆಗಿದೆ. 

ಡಾಲರ್ ಸೂಚ್ಯಂಕವು ಮೂರು ವರ್ಷದ ಅವಧಿಯಲ್ಲಿ ಮೊದಲ ಬಾರಿಗೆ 100 ಅಂಶಕ್ಕಿಂತ ಕೆಳಗಿಳಿಸಿದೆ. ಇದು ರೂಪಾಯಿ ಮೌಲ್ಯ ಏರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ADVERTISEMENT

ಡಾಲರ್‌ ಸೂಚ್ಯಂಕವು ಶೇ 1.52ರಷ್ಟು ಇಳಿಕೆಯಾಗಿದೆ. ಅಮೆರಿಕ ಮತ್ತು ಚೀನಾ ನಡುವಿನ ಸುಂಕ ಸಮರದಿಂದ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಮೌಲ್ಯ ಇಳಿಕೆಯಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.