ADVERTISEMENT

ರೂಪಾಯಿ ಮೌಲ್ಯ ಗರಿಷ್ಠ ಮಟ್ಟಕ್ಕೆ

ದಿನದ ವಹಿವಾಟಿನಲ್ಲಿ 112 ಪೈಸೆ ಜಿಗಿತ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 20:05 IST
Last Updated 18 ಡಿಸೆಂಬರ್ 2018, 20:05 IST
   

ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಮಂಗಳವಾರ ಡಾಲರ್‌ ಎದುರು ರೂಪಾಯಿ ಮೌಲ್ಯ 112 ಪೈಸೆ ವೃದ್ಧಿಯಾಗಿ,ಒಂದು ಡಾಲರ್‌ಗೆ₹ 70.44ಕ್ಕೆ ತಲುಪಿತು.

ಐದು ವರ್ಷಗಳ ದಿನದ ವಹಿವಾಟು ಅವಧಿಯಲ್ಲಿಯೇ ರೂಪಾಯಿ ಕಂಡಿರುವ ಗರಿಷ್ಠ ಗಳಿಕೆ ಇದಾಗಿದೆ. 2013ರ ಸೆಪ್ಟೆಂಬರ್‌ 19ರಂದು ರೂಪಾಯಿ ಮೌಲ್ಯ 161 ಪೈಸೆಗಳಷ್ಟು ಹೆಚ್ಚಾಗಿತ್ತು.

ರಫ್ತುದಾರರು ಮತ್ತು ಬ್ಯಾಂಕ್‌ಗಳು ಅಮೆರಿಕದ ಡಾಲರ್‌ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಿದರು. ಇದರ ಜತೆಗೆ ಕಚ್ಚಾ ತೈಲ ದರ ಇಳಿಕೆಯೂ ರೂಪಾಯಿ ಮೌಲ್ಯ ಹೆಚ್ಚಾಗುವಂತೆ ಮಾಡಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ADVERTISEMENT

ಬಾಂಡ್‌ಗಳಿಕೆ, ಷೇರುಪೇಟೆಯಲ್ಲಿನಸಕಾರಾತ್ಮಕ ವಹಿವಾಟು ಸಹ ರೂಪಾಯಿ ಮೌಲ್ಯ ವೃದ್ಧಿಯಾಗುವಂತೆ ಮಾಡಿವೆ ಎಂದೂ ಹೇಳಿದ್ದಾರೆ.

ತೈಲ ದರ ಇಳಿಕೆ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 2.26ರಷ್ಟು ಇಳಿಕೆಯಾಗಿ ಒಂದು ಬ್ಯಾರೆ
ಲ್‌ಗೆ 58.26 ಡಾಲರ್‌ಗಳಿಗೆ ಇಳಿಕೆಯಾಗಿದೆ. ಇದು 14 ತಿಂಗಳ ಕನಿಷ್ಠ ಮಟ್ಟವಾಗಿದೆ.ಮಾರುಕಟ್ಟೆಯ ಬೇಡಿಕೆಗಿಂತಲೂ ಹೆಚ್ಚಿನ ತೈಲ ಪೂರೈಕೆಯಾಗುತ್ತಿರುವುದರಿಂದ ದರ ಇಳಿಕೆ ಕಾಣಲಾರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.