
ಸ್ಯಾನ್ ಫ್ರಾನ್ಸಿಸ್ಕೊ: ಆರಂಭಿಕ ಹಂತದ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಎ.ಐ ತಂತ್ರಜ್ಞಾನದ ವೈಶಿಷ್ಟ್ಯಗಳು ಇರುವಂತೆ ಮಾಡಲಾಗುವುದು ಎಂದು ಸ್ಯಾಮ್‌ಸಂಗ್ ಹೇಳಿದೆ. ಈ ಮೂಲಕ ಎ.ಐ ತಂತ್ರಜ್ಞಾನವು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಗುರಿಯನ್ನು ಕಂಪನಿ ಇರಿಸಿಕೊಂಡಿದೆ.
ಎ.ಐ ಆಧಾರಿತ ಫೋನ್‌ಗಳು ಮುಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ವರ್ಗದಲ್ಲಿ ಹೆಚ್ಚಿನ ಪಾಲು ಹೊಂದಲಿವೆ ಎಂದು ಕಂಪನಿ ಭಾವಿಸಿರುವುದಾಗಿ ಸ್ಯಾಮ್‌ಸಂಗ್ ಇಂಡಿಯಾ ಕಂಪನಿಯ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲನ್ ಹೇಳಿದ್ದಾರೆ.
ಸ್ಯಾಮ್‌ಸಂಗ್ ಕಂಪನಿಯು ಗ್ಯಾಲಕ್ಸಿ ಎ07 ಮಾದರಿಯನ್ನು ಭಾರತದ ಮಾರುಕಟ್ಟೆಗೆ ಈಚೆಗೆ ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ ₹15 ಸಾವಿರ. ಬಳಕೆದಾರರ ನಿತ್ಯದ ಕೆಲವು ಕೆಲಸಗಳಿಗೆ ನೆರವಾಗಲು ಇದರಲ್ಲಿ ಎ.ಐ ಆಧಾರಿತ ವೈಶಿಷ್ಟ್ಯಗಳನ್ನು ನೀಡಲಾಗಿದೆ.
‘ಈಗ ನಾವು ಎ.ಐ ಸೌಲಭ್ಯವನ್ನು ಆರಂಭಿಕ ಬೆಲೆ ಹಂತದ ಫೋನ್‌ಗಳಲ್ಲಿಯೂ ಒದಗಿಸಲಿದ್ದೇವೆ’ ಎಂದು ಪುಲ್ಲನ್ ಹೇಳಿದ್ದಾರೆ. ಕೌಂಟರ್‌ಪಾಯಿಂಟ್ ಸಂಸ್ಥೆಯ ಬಳಿ ಇರುವ ದತ್ತಾಂಶದ ಪ್ರಕಾರ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಶೇ 13ರಷ್ಟು ಪಾಲು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.