ADVERTISEMENT

ಎಚ್‌ಡಿಎಫ್‌ಸಿ ಸಿಇಒ: ಜಗದೀಶನ್ ನೇಮಕಕ್ಕೆ ಆರ್‌ಬಿಐ ಒಪ್ಪಿಗೆ

ಪಿಟಿಐ
Published 4 ಆಗಸ್ಟ್ 2020, 21:04 IST
Last Updated 4 ಆಗಸ್ಟ್ 2020, 21:04 IST
ಎಚ್‌ಡಿಎಫ್‌ಸಿ ಬ್ಯಾಂಕ್‌
ಎಚ್‌ಡಿಎಫ್‌ಸಿ ಬ್ಯಾಂಕ್‌   

ಮುಂಬೈ: ಎಚ್‌ಡಿಎಫ್‌ಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಹಾಗೂ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಸ್ಥಾನಕ್ಕೆ ಶಶಿಧರ್ ಜಗದೀಶನ್ ಅವರನ್ನು ಅಕ್ಟೋಬರ್ 27ರಿಂದ ಅನ್ವಯವಾಗುವಂತೆ ನೇಮಕ ಮಾಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅನುಮತಿ ನೀಡಿದೆ.

ಈಗಿನ ಸಿಇಒ ಮತ್ತು ಎಂ.ಡಿ ಆದಿತ್ಯ ಪುರಿ ಅವರು 25ಕ್ಕೂ ಹೆಚ್ಚಿನ ವರ್ಷಗಳಿಂದ ಬ್ಯಾಂಕನ್ನು ಮುನ್ನಡೆಸಿದ್ದರು. ಅವರ ಅಧಿಕಾರಾವಧಿ ಅಕ್ಟೋಬರ್ 26ರಂದು ಕೊನೆಗೊಳ್ಳಲಿದೆ. ಜಗದೀಶನ್ ಅವರ ಹೆಸರು ಎಚ್‌ಡಿಎಫ್‌ಸಿ ಬ್ಯಾಂಕಿನ ನಿರ್ದೇಶಕರ ಮಂಡಳಿಯ ಮೊದಲ ಆಯ್ಕೆಯಾಗಿತ್ತು. ಮಂಡಳಿ ಕಳುಹಿಸಿದ್ದ ಮೂರು ಹೆಸರುಗಳಲ್ಲಿ ಜಗದೀಶನ್ ಅವರ ಹೆಸರಿಗೆ ಆರ್‌ಬಿಐ ಒಪ್ಪಿಗೆ ನೀಡಿದೆ.

ಜಗದೀಶನ್ ಅವರು 1996ರಿಂದಲೂ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. 2008ರಲ್ಲಿ ಬ್ಯಾಂಕಿನ ಮುಖ್ಯ ಹಣಕಾಸು ಅಧಿಕಾರಿಯಾಗಿ ನೇಮಕ ಆಗಿದ್ದರು. ಪುರಿ ಅವರ ನೇತೃತ್ವದಲ್ಲಿ ಬ್ಯಾಂಕಿನ ಲಾಭ ಗಳಿಕೆಯ ಪ್ರಮಾಣವು ವಾರ್ಷಿಕ ಶೇಕಡ 30ರಷ್ಟು ಇತ್ತು. ಈಚಿನ ಕೆಲವು ವರ್ಷಗಳಲ್ಲಿ ಅದು ಶೇಕಡ 20ರ ಮಟ್ಟಕ್ಕೆ ಇಳಿಕೆಯಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.