ADVERTISEMENT

ಕೆಲವು ದೇಶಗಳಿಗೆ ತೈಲ ಪೂರೈಕೆ ಕಡಿತ, ಭಾರತಕ್ಕೆ ಕಡಿತವಿಲ್ಲ

ರಾಯಿಟರ್ಸ್
Published 12 ಮಾರ್ಚ್ 2021, 16:22 IST
Last Updated 12 ಮಾರ್ಚ್ 2021, 16:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ/ಸಿಂಗಪುರ: ಸೌದಿ ಅರೇಬಿಯಾ ದೇಶವು ಉತ್ತರ ಏಷ್ಯಾದ ಕನಿಷ್ಠ ನಾಲ್ಕು ದೇಶಗಳಿಗೆ ಏಪ್ರಿಲ್‌ನಲ್ಲಿ ಪೂರೈಕೆ ಆಗಬೇಕಿರುವ ಕಚ್ಚಾ ತೈಲದ ಪ್ರಮಾಣದಲ್ಲಿ ಕಡಿತ ಮಾಡಿದೆ. ಕಡಿತದ ಪ್ರಮಾಣವು ಗರಿಷ್ಠ ಶೇಕಡ 15ರವರೆಗೆ ಇರಲಿದೆ. ಆದರೆ, ಭಾರತಕ್ಕೆ ಪೂರೈಸಲಿರುವ ಕಚ್ಚಾ ತೈಲದ ಪ್ರಮಾಣವನ್ನು ಸೌದಿ ಅರೇಬಿಯಾ ಕಡಿಮೆ ಮಾಡಿಲ್ಲ.

ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡುವ ದೇಶಗಳು ಹಾಗೂ ಆ ದೇಶಗಳ ಮಿತ್ರರಾಷ್ಟ್ರಗಳು (ಒಪೆಕ್‌+) ಏಪ್ರಿಲ್‌ನಲ್ಲಿ ಕೂಡ ತೈಲ ಉತ್ಪಾದನೆ ಹೆಚ್ಚಿಸದಿರುವ ತೀರ್ಮಾನ ಕೈಗೊಂಡಿವೆ. ಈ ತೀರ್ಮಾನದ ಬೆನ್ನಿಗೇ, ಸೌದಿ ಅರೇಬಿಯಾ ದೇಶವು ಈ ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಚೀನಾದ ತೈಲ ಸಂಸ್ಕರಣಾ ಕಂಪನಿಗಳಿಗೆ ಸೌದಿ ಅರೇಬಿಯಾದಿಂದ ಬರುವ ಕಚ್ಚಾ ತೈಲದ ಪ್ರಮಾಣದಲ್ಲಿ ತುಸು ಕಡಿತ ಆಗಲಿದೆ. ಜಪಾನ್‌ಗೆ ಸೌದಿಯಿಂದ ಬರುವ ಕಚ್ಚಾ ತೈಲದ ಪ್ರಮಾಣದಲ್ಲಿನ ಕಡಿತವು ಶೇ 10ರಿಂದ ಶೇ 15ರವರೆಗೆ ಇರಲಿದೆ ಎಂದು ಗೊತ್ತಾಗಿದೆ. ಭಾರತಕ್ಕೆ ಪೂರೈಸುವ ಕಚ್ಚಾ ತೈಲದ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಭಾರತದ ತೈಲ ಸಂಸ್ಕರಣಾ ಕಂಪನಿಗಳು ಮಾಡಿದ್ದ ಮನವಿಯನ್ನು ಸೌದಿ ಪುರಸ್ಕರಿಸಿಲ್ಲವಾದರೂ, ಪೂರೈಕೆ ಕಡಿತ ಮಾಡಿಲ್ಲ ಎಂದು ಮೂಲಗಳು ಹೇಳಿವೆ.

ADVERTISEMENT

ಈ ವಿಚಾರವಾಗಿ ಪ್ರತಿಕ್ರಿಯೆ ಕೋರಿದಾಗ, ಸೌದಿ ಆರಾಮ್ಕೊ ಕಂಪನಿಯಿಂದ ಉತ್ತರ ದೊರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.