ADVERTISEMENT

ಎಸ್‌ಬಿಐ: ಸಾಲದ ಬಡ್ಡಿ ದರದಲ್ಲಿ ರಿಯಾಯಿತಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 17:26 IST
Last Updated 16 ಆಗಸ್ಟ್ 2021, 17:26 IST
ಎಸ್‌ಬಿಐ
ಎಸ್‌ಬಿಐ   

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ವ್ಯಕ್ತಿಗತವಾಗಿ ಸಾಲ ಪಡೆಯುವವರಿಗೆ ಹೊಸ ಕೊಡುಗೆಗಳನ್ನು ಘೋಷಿಸಿದೆ.

ಕಾರು ಖರೀದಿಗೆ ಸಾಲ ಪಡೆಯುವವರಿಗೆ ಪ್ರೊಸೆಸಿಂಗ್ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಾಗಿ ಬ್ಯಾಂಕ್ ಹೇಳಿದೆ. ಯೋನೊ (YONO) ಆ್ಯಪ್ ಮೂಲಕ ಕಾರು ಸಾಲಕ್ಕೆ ಅರ್ಜಿ ಸಲ್ಲಿಸುವವರಿಗೆ ಬಡ್ಡಿ ದರದಲ್ಲಿ ಶೇಕಡ 0.25ರಷ್ಟು ವಿನಾಯಿತಿ ಇರುತ್ತದೆ, ವಾರ್ಷಿಕ ಶೇ 7.5ರ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ.

ಚಿನ್ನದ ಮೇಲೆ ಸಾಲ ಪಡೆಯುವವರಿಗೆ ಬಡ್ಡಿ ದರದಲ್ಲಿ ಶೇ 0.75ರಷ್ಟು ರಿಯಾಯಿತಿ ಪ್ರಕಟಿಸಲಾಗಿದೆ. ಯೋನೊ ಮೂಲಕ ಚಿನ್ನದ ಸಾಲ ಪಡೆಯುವವರಿಗೆ ಪ್ರೊಸೆಸಿಂಗ್ ಶುಲ್ಕ ಇಲ್ಲ. ವೈಯಕ್ತಿಕ ಸಾಲ ಹಾಗೂ ಪಿಂಚಣಿ ಸಾಲ ಪಡೆಯುವವರಿಗೆ ಪ್ರೊಸೆಸಿಂಗ್ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಮುಂಚೂಣಿ ಆರೋಗ್ಯಸೇವಾ ಕಾರ್ಯಕರ್ತರು ವೈಯಕ್ತಿಕ ಸಾಲ ಪಡೆದಲ್ಲಿ ಅವರಿಗೆ ಬಡ್ಡಿಯಲ್ಲಿ ಶೇ 0.50ರಷ್ಟು ವಿನಾಯಿತಿ ಸಿಗಲಿದೆ. ಈ ಸೌಲಭ್ಯವು ಶೀಘ್ರದಲ್ಲಿಯೇ ಕಾರು ಸಾಲ ಹಾಗೂ ಚಿನ್ನದ ಸಾಲಕ್ಕೆ ಕೂಡ ವಿಸ್ತರಣೆ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.