ಎಸ್‌ಬಿಐ
ಸಾಂಕೇತಿಕ ಚಿತ್ರ
ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ₹50 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಿದೆ.
ಪ್ರಸಕ್ತ ತಿಂಗಳಿನಲ್ಲಿ ಮೂಲಸೌಕರ್ಯ ಬಾಂಡ್‌ಗಳ ವಿತರಣೆ ಮೂಲಕ ₹10 ಸಾವಿರ ಕೋಟಿ ಸಂಗ್ರಹಿಸಿತ್ತು.
ಅಡಿಷನಲ್ ಟೈರ್ 1 ಬಾಂಡ್‌ನಡಿ ₹5 ಸಾವಿರ ಕೋಟಿ, ಟೈರ್ 2 ಬಾಂಡ್‌ಗಳ ಮೂಲಕ ₹15 ಸಾವಿರ ಕೋಟಿ ಹಾಗೂ ದೀರ್ಘಾವಧಿ ಬಾಂಡ್ ವಿತರಣೆಯಡಿ ₹30 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಿದೆ.
ಎಲ್ಲಾ ಬಾಂಡ್‌ಗಳಿಗೂ ಹೂಡಿಕೆದಾರರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಬಾಂಡ್‌ಗಳಿಗೆ ಎರಡು ಪಟ್ಟು ಬೇಡಿಕೆ ಕಂಡುಬಂದಿದೆ ಎಂದು ಎಸ್‌ಬಿಐ ತಿಳಿಸಿದೆ.
‘ಇದು ದೇಶದ ಅತಿದೊಡ್ಡ ಬ್ಯಾಂಕ್‌ನ ಮೇಲೆ ಹೂಡಿಕೆದಾರರು ಇಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ’ ಎಂದು ಬ್ಯಾಂಕ್ ಅಧ್ಯಕ್ಷ ಸಿ.ಎಸ್. ಸೆಟ್ಟಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.