ADVERTISEMENT

ಠೇವಣಿ ಬಡ್ಡಿ ದರ ಹೆಚ್ಚಿಸಿದ ಎಸ್‌ಬಿಐ: ಶೇ 0.40ರಿಂದ ಶೇ 0.90ರಷ್ಟು ಏರಿಕೆ

ಪಿಟಿಐ
Published 10 ಮೇ 2022, 14:01 IST
Last Updated 10 ಮೇ 2022, 14:01 IST
ಎಸ್‌ಬಿಐ
ಎಸ್‌ಬಿಐ    

ಮುಂಬೈ: ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐ ₹ 2 ಕೋಟಿಗಿಂತ ಹೆಚ್ಚಿನ ಮೊತ್ತದ ವಿವಿಧ ಅವಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇಕಡ 0.40ರಿಂದ ಶೇ 0.90ರವರೆಗೆ ಹೆಚ್ಚಿಸಿದೆ. ಇದು ಮಂಗಳವಾರದಿಂದ ಜಾರಿಗೆ ಬಂದಿದೆ.

ಒಂದು ವರ್ಷಕ್ಕಿಂತ ಹೆಚ್ಚಿನ, ಎರಡು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ 0.40ರಷ್ಟು ಹೆಚ್ಚಿಸಲಾಗಿದೆ. ಎರಡು ವರ್ಷಕ್ಕಿಂತ ಹೆಚ್ಚಿನ ಹಾಗೂ ಮೂರು ವರ್ಷದವರೆಗಿನ ಠೇವಣಿಯ ಬಡ್ಡಿ ದರ ಶೇ 0.65ರಷ್ಟು, ಮೂರು ವರ್ಷಕ್ಕಿಂತ ಹೆಚ್ಚಿನ ಹಾಗೂ ಹತ್ತು ವರ್ಷದವರೆಗಿನ ಠೇವಣಿ ಬಡ್ಡಿ ದರ ಶೇ 0.90ರಷ್ಟು ಜಾಸ್ತಿ ಆಗಿದೆ ಎಂದು ಬ್ಯಾಂಕ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.