ನವದೆಹಲಿ: ದೇಶದಲ್ಲಿ ಚಾವಣಿ ಸೌರ ಯೋಜನೆಯನ್ನು ಉತ್ತೇಜಿಸಲು ವಿಶ್ವಬ್ಯಾಂಕ್‌ನೊಂದಿಗೆ ₹1,300 ಕೋಟಿಗೂ ಹೆಚ್ಚು ಸಾಲ ಪತ್ರ (ಎಲ್‌ಒಸಿ) ಯೋಜನೆಗೆ ಸಹಿ ಹಾಕಿರುವುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶುಕ್ರವಾರ ಹೇಳಿದೆ.
ವಸತಿ ಮತ್ತು ಸಾಂಸ್ಥಿಕ ವಲಯಗಳಲ್ಲಿ ಗ್ರಿಡ್-ಸಂಪರ್ಕಿತ ಚಾವಣಿ ಸೌರ ಯೋಜನೆಗಳನ್ನು ಎಲ್‌ಒಸಿ ಬೆಂಬಲಿಸಲಿದೆ ಎಂದು ಎಸ್‌ಬಿಐ ಷೇರುಪೇಟೆಗೆ ತಿಳಿಸಿದೆ. ಈ ವಾರದ ಆರಂಭದಲ್ಲಿ, ಹವಾಮಾನ ಕ್ರಿಯಾ ಯೋಜನೆಗಳನ್ನು ಬೆಂಬಲಿಸಲು ಎಸ್‌ಬಿಐ, ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್‌ನೊಂದಿಗೆ (ಇಐಬಿ) ₹1,800 ಕೋಟಿ ಮೊತ್ತದ ಎಲ್‌ಒಸಿಗೆ ಸಹಿ ಹಾಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.