ADVERTISEMENT

ಬಾಂಡ್‌ ಹಂಚಿಕೆಯ ಮೂಲಕ ಎಸ್‌ಬಿಐನಿಂದ ₹20 ಸಾವಿರ ಕೋಟಿ ಸಂಗ್ರಹ

ಪಿಟಿಐ
Published 16 ಜುಲೈ 2025, 14:22 IST
Last Updated 16 ಜುಲೈ 2025, 14:22 IST
ಎಸ್‌ಬಿಐ
ಎಸ್‌ಬಿಐ   

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಾಂಡ್‌ ಹಂಚಿಕೆಯ ಮೂಲಕ ದೇಶಿ ಹೂಡಿಕೆದಾರರಿಂದ ₹20 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ನಿರ್ಧರಿಸಲಾಗಿದೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ತಿಳಿಸಿದೆ.

ಬಾಸೆಲ್‌–3, ಹೆಚ್ಚುವರಿ ಟಯರ್–1 ಮತ್ತು ಟಯರ್–2 ಬಾಂಡ್‌ಗಳ ಮೂಲಕ ಬಂಡವಾಳ ಸಂಗ್ರಹಿಸಲು ಬ್ಯಾಂಕ್‌ನ ಆಡಳಿತ ಮಂಡಳಿ ಅನುಮೋದನೆ ನೀಡಿದೆ ಎಂದು ಬ್ಯಾಂಕ್‌ ಷೇರುಪೇಟೆಗೆ ಬುಧವಾರ ತಿಳಿಸಿದೆ.

ಈ ಬಂಡವಾಳ ಸಂಗ್ರಹಕ್ಕೆ ಅಗತ್ಯ ಇರುವೆಡೆಗಳಲ್ಲಿ ಸರ್ಕಾರದ ಅನುಮತಿಯನ್ನೂ ಪಡೆಯಬೇಕಾಗುತ್ತದೆ ಎಂದು ಅದು ತಿಳಿಸಿದೆ.

ADVERTISEMENT

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.