ADVERTISEMENT

ನೂರು ಕೆ.ಜಿ. ಕುಲಾಂತರಿ ಸಾಸಿವೆ ಬೀಜಕ್ಕೆ ಬೇಡಿಕೆ

ಕೇಂದ್ರ ಕೃಷಿ ಸಚಿವಾಲಯಕ್ಕೆ ಎಸ್‌ಇಎ ಒತ್ತಾಯ

ಪಿಟಿಐ
Published 2 ನವೆಂಬರ್ 2022, 19:46 IST
Last Updated 2 ನವೆಂಬರ್ 2022, 19:46 IST
   

ನವದೆಹಲಿ: ಕುಲಾಂತರಿ ಹೈಬ್ರಿಡ್‌ ಸಾಸಿವೆ (ಜಿಎಂ) ಡಿಎಂಎಚ್‌–11 ಅನ್ನು ಪ್ರಸ್ತುತ ಹಿಂಗಾರು ಋತುವಿನಲ್ಲಿ ಮಾದರಿ ಫಾರ್ಮ್‌ಗಳಲ್ಲಿ ಬೆಳೆಯಲು ಒಂದು ಕ್ವಿಂಟಲ್‌ ಜಿಎಂ ಸಾಸಿವೆ ಬಿತ್ತನೆ ಬೀಜ ಒದಗಿಸುವಂತೆ ಖಾದ್ಯ ತೈಲಗಳ ಉದ್ಯಮ ಸಂಸ್ಥೆ ಎಸ್ಇಎ ಬುಧವಾರ ಕೇಂದ್ರ ಕೃಷಿ ಸಚಿವಾಲಯವನ್ನು ಒತ್ತಾಯಿಸಿದೆ.

ಈ ಸಂಬಂಧ ಎಸ್‌ಇಎ ಅಧ್ಯಕ್ಷ ಅಜಯ್‌ ಝುಂಝನ್‌ವಾಲಾ ಅವರು ಕೃಷಿ ಕಾರ್ಯದರ್ಶಿ ಮನೋಜ್‌ ಅಹುಜಾ ಅವರಿಗೆ ಪತ್ರ ಬರೆದಿದ್ದಾರೆ.

ಸುಮಾರು 200 ಮಂದಿ ಮಾದರಿ ರೈತರಿಂದ ಜಿಎಂ ಸಾಸಿವೆ ಬೆಳೆಸಲು ಎಸ್‌ಇಎ ಬಯಸಿದ್ದು, ಇದಕ್ಕಾಗಿ ಒಂದು ಕ್ವಿಂಟಲ್‌ ಡಿಎಂಎಚ್‌–11 ಸಾಸಿವೆ ಬಿತ್ತನೆ
ಬೀಜವನ್ನು ಕೃಷಿ ಸಚಿವಾಲಯ ಒದಗಿಸ
ಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ಪ್ರಮುಖವಾಗಿ ಸಾಸಿವೆ ಬೆಳೆಯುವ ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್‌ ಮತ್ತು ಹರಿಯಾಣದಲ್ಲಿ ಪ್ರಸ್ತುತ ಹಿಂಗಾರಿನಲ್ಲಿ ಸಾಸಿವೆ ಕೃಷಿಯ ಸುಮಾರು ಒಂದು ಸಾವಿರ ಫಾರ್ಮ್‌ಗಳಲ್ಲಿ ಜಿಎಂ ಸಾಸಿವೆ ಬೆಳೆಸುವ ಯೋಜನೆ ಇದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಕುಲಾಂತರಿ ಹೈಬ್ರಿಡ್‌ ಸಾಸಿವೆ ಬೆಳೆಗೆ ಪರಿಸರ ಅನುಮತಿಯನ್ನು ಜೆನೆಟಿಕ್ ಎಂಜಿನಿಯರಿಂಗ್ ಮೌಲ್ಯಮಾಪನ ಸಮಿತಿಯ ( ಜಿಇಎಸಿ) ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ಅಕ್ಟೋಬರ್‌
ನಲ್ಲಿ ಅನುಮತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.