ನವದೆಹಲಿ: ಕಳೆದ ಆರ್ಥಿಕ ವರ್ಷದಲ್ಲಿ ದೇಶದಿಂದ 16.98 ಲಕ್ಷ ಟನ್ ಸಾಗರೋತ್ಪನ್ನ ರಫ್ತಾಗಿದ್ದು, ಇದರ ಮೌಲ್ಯ ₹62,408 ಕೋಟಿಯಷ್ಟಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಶನಿವಾರ ತಿಳಿಸಿದೆ.
2023–24ರ ಆರ್ಥಿಕ ವರ್ಷದಲ್ಲಿ 17.81 ಲಕ್ಷ ಟನ್ ಸಾಗರೋತ್ಪನ್ನಗಳ ರಫ್ತು ಆಗಿತ್ತು. ಅದರ ಮೌಲ್ಯವು ₹60,523 ಕೋಟಿಯಾಗಿತ್ತು. ಕಳೆದ ಬಾರಿಯ ರಫ್ತು ಪ್ರಮಾಣಕ್ಕೆ ಹೋಲಿಸಿದರೆ ಈ ಬಾರಿಯ ರಫ್ತು ಪ್ರಮಾಣ ಕಡಿಮೆ ಎಂದು ತಿಳಿಸಿದೆ.
ಭಾರತದ ಸಾಗರೋತ್ಪನ್ನಗಳು ಹಾಗೂ ಪ್ರೋಜನ್ ಸೀಗಡಿಗೆ ಅಮೆರಿಕ ಮತ್ತು ಚೀನಾ ಪ್ರಮುಖ ಮಾರುಕಟ್ಟೆಗಳು. ಈ ಮಾರುಕಟ್ಟೆಗಳಿಗೆ ಕಳೆದ ಬಾರಿ ಒಟ್ಟು ₹45,137 ಕೋಟಿ ಮೌಲ್ಯ ಉತ್ಪನ್ನಗಳ ರಫ್ತು ಆಗಿತ್ತು. ರಫ್ತು ಪ್ರಮಾಣದಲ್ಲಿ ಅಮೆರಿಕ ಮತ್ತು ಚೀನಾ ಶೇ 43ರಷ್ಟು ಪಾಲನ್ನು ಹೊಂದಿದ್ದು, ಮೌಲ್ಯದಲ್ಲಿ ಶೇ 69ರಷ್ಟು ಪಾಲು ಹೊಂದಿದೆ.
ಅಮೆರಿಕವು ಗಾತ್ರ ಮತ್ತು ಮೌಲ್ಯದಲ್ಲಿ ಭಾರತದ ಸಾಗರೋತ್ಪನ್ನಗಳ ಅತಿದೊಡ್ಡ ಆಮದುಗಾರ ದೇಶ.
ವಿಶಾಖಪಟ್ಟಣ ಮತ್ತು ನವಿ ಮುಂಬೈನ ಜವಾಹಾರ್‌ಲಾಲ್ ನೆಹರೂ ಬಂದರು ಪ್ರಾಧಿಕಾರ (ಜೆಎನ್‌ಪಿಟಿ) ಸಾಗರೋತ್ಪನ್ನಗಳ ರಫ್ತಿನ ಪ್ರಮುಖ ಬಂದರುಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.