ADVERTISEMENT

ಷೇರುಪೇಟೆ: ಗೂಳಿಯ ಓಟಕ್ಕೆ ತಡೆ

ಪಿಟಿಐ
Published 22 ಮಾರ್ಚ್ 2019, 20:38 IST
Last Updated 22 ಮಾರ್ಚ್ 2019, 20:38 IST
   

ಮುಂಬೈ: ಎಂಟು ವಹಿವಾಟು ದಿನಗಳ ಕಾಲ ನಿರಂತರ ಏರಿಕೆ ದಾಖಲಿಸಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಶುಕ್ರವಾರದ ವಹಿವಾಟಿನಲ್ಲಿ 222 ಅಂಶಗಳ ಕುಸಿತ ಕಂಡಿತು.

ಮುಂದಿನ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ವೃದ್ಧಿ ದರವು ಶೇ 6.8ಕ್ಕೆ ಕುಸಿತವಾಗಲಿದೆ ಎಂದು ಫಿಚ್‌ ರೇಟಿಂಗ್‌ ತಿಳಿಸಿರುವುದು, ಜಾಗತಿಕ ಷೇರುಪೇಟೆಯಲ್ಲಿನ ನೀರಸ ವಹಿವಾಟು, ಡಾಲರ್‌ ಎದುರು ರೂಪಾಯಿ ವಿನಿಮಯ ದರ ಕುಸಿತ ಮುಂತಾದವು ಪೇಟೆಯಲ್ಲಿ ಮಾರಾಟ ಒತ್ತಡ ಸೃಷ್ಟಿಸಿದವು. ಹೂಡಿಕೆದಾರರು ಲಾಭ ಮಾಡಿಕೊಳ್ಳಲು ಮುಗಿಬಿದ್ದರು. ಹೀಗಾಗಿ ದೇಶಿ ಷೇರುಪೇಟೆಗಳಲ್ಲಿನ ವಾರಾಂತ್ಯದ ವಹಿವಾಟು ಕುಸಿತದಲ್ಲಿ ಕೊನೆಗೊಂಡಿತು. ದಿನದ ಆರಂಭದಲ್ಲಿ ಸಕಾರಾತ್ಮಕ ಆರಂಭ ಕಂಡಿದ್ದ ವಹಿವಾಟಿನಲ್ಲಿ ದಿಢೀರನೆ ಮಾರಾಟ ಒತ್ತಡ ಕಂಡು ಬಂದಿತು. ಹೀಗಾಗಿ ಸೂಚ್ಯಂಕವು 222 ಅಂಶಗಳಿಗೆ ಎರವಾಗಿ 38,164 ಅಂಶಗಳಿಗೆ ಇಳಿಯಿತು.

ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ಯಲ್ಲಿಯೂ 64 ಅಂಶಗಳು ಕಡಿಮೆಯಾಗಿ 11,456 ಅಂಶಗಳಿಗೆ ಕುಸಿತ ಉಂಟಾಯಿತು. ಟಾಟಾ ಮೋಟರ್ಸ್‌ ಷೇರು (ಶೇ 2.47), ರಿಲಯನ್ಸ್‌ ಇಂಡಸ್ಟ್ರೀಸ್‌ (ಶೇ 2.44), ಮಾರುತಿ (ಶೇ 1.84), ಎಸ್‌ಬಿಐ (ಶೇ 1.76) ಮತ್ತು ಬಜಾಜ್ ಫೈನಾನ್ಸ್‌ ಶೇ 1.24 ರಷ್ಟು ಕುಸಿತ ಕಂಡವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.