ADVERTISEMENT

ಸೆನ್ಸೆಕ್ಸ್| ನಿನ್ನೆ ಇತಿಹಾಸ ಸೃಷ್ಟಿ, ಇಂದು 746 ಅಂಶ ಕುಸಿತ

ಪಿಟಿಐ
Published 22 ಜನವರಿ 2021, 15:13 IST
Last Updated 22 ಜನವರಿ 2021, 15:13 IST
ಮುಂಬೈ ಶೇರು ಮಾರುಕಟ್ಟೆ
ಮುಂಬೈ ಶೇರು ಮಾರುಕಟ್ಟೆ    

ಮುಂಬೈ: ವರ್ತಕರು ಲಾಭ ಗಳಿಕೆಯ ಉದ್ದೇಶದಿಂದ ಷೇರುಗಳ ಮಾರಾಟಕ್ಕೆ ಹೆಚ್ಚಿನ ಗಮನ ನೀಡಿದ ಪರಿಣಾಮವಾಗಿ, ಬಿಎಸ್‌ಇ ಸೆನ್ಸೆಕ್ಸ್ ಶುಕ್ರವಾರದ ವಹಿವಾಟಿನಲ್ಲಿ 746 ಅಂಶಗಳ ಇಳಿಕೆ ದಾಖಲಿಸಿತು. ನಿಫ್ಟಿ 218 ಅಂಶ ಇಳಿಕೆ ಕಂಡಿತು.

ಸೆನ್ಸೆಕ್ಸ್‌ ಗುರುವಾರದ ವಹಿವಾಟಿನ ನಡುವೆ 50 ಅಂಶಗಳನ್ನು ದಾಟಿ ಇತಿಹಾಸ ಸೃಷ್ಟಿಸಿತ್ತು. ಲಾಭಗಳಿಕೆಯ ಉದ್ದೇಶದ ವಹಿವಾಟು ಆರಂಭವಾದ ನಂತರ ಕುಸಿತ ಕಂಡಿತ್ತು.

ಸೆನ್ಸೆಕ್ಸ್‌ನಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಮೌಲ್ಯ ಕಳೆದುಕೊಂಡಿದ್ದು ಎಕ್ಸಿಸ್‌ ಬ್ಯಾಂಕಿನ ಷೇರುಗಳು. ಅವು ಶೇ 4.63ರಷ್ಟು ಇಳಿಕೆ ಕಂಡವು. ಏಷ್ಯನ್‌ ಪೇಂಟ್ಸ್‌, ಎಸ್‌ಬಿಐ, ಇಂಡಸ್‌ಇಂಡ್‌ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರುಗಳು ಕೂಡ ಇಳಿಕೆ ಕಂಡವು.

ADVERTISEMENT

ಬಜಾಜ್ ಆಟೊ ಷೇರುಗಳು ಶೇ 10.45ರಷ್ಟು ಏರಿಕೆ ದಾಖಲಿಸಿದವು. ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಬಜಾಜ್‌ ಆಟೊ ಕಂಪನಿಯ ಲಾಭದ ಪ್ರಮಾಣದಲ್ಲಿ ಶೇ 23ರಷ್ಟು ಹೆಚ್ಚಳ ಆಗಿದೆ. ಈ ತ್ರೈಮಾಸಿಕದಲ್ಲಿ ಕಂಪನಿಯು 1,556 ಕೋಟಿ ಲಾಭ ಗಳಿಸಿದೆ. ಹಿಂದುಸ್ತಾನ್‌ ಯುನಿಲಿವರ್, ಅಲ್ಟ್ರಾಟೆಕ್‌ ಸಿಮೆಂಟ್, ಟಿಸಿಎಸ್‌, ಬಜಾಜ್‌ ಫಿನ್‌ಸರ್ವ್‌ ಮತ್ತು ಇನ್‌ಫೊಸಿಸ್‌ ಷೇರುಗಳ ಬೆಲೆಯಲ್ಲಿ ಏರಿಕೆ ಆಯಿತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯಲ್ಲಿ ಶೇ 1.80ರಷ್ಟು ಇಳಿಕೆ ಆಗಿದೆ. ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 55.09 ಅಮರಿಕನ್ ಡಾಲರ್‌ಗೆ ಮಾರಾಟವಾಗಿದೆ. ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ 2 ಪೈಸೆ ಹೆಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.