ADVERTISEMENT

ಮೊದಲ ದಿನ ಅಲ್ಪ ಗಳಿಕೆ ಕಂಡ ಷೇರುಪೇಟೆ

ಪಿಟಿಐ
Published 1 ಜನವರಿ 2024, 16:09 IST
Last Updated 1 ಜನವರಿ 2024, 16:09 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಹೊಸ ವರ್ಷ ಆರಂಭದ ದಿನವಾದ ಸೋಮವಾರ ಅಲ್ಪ ಗಳಿಕೆಯೊಂದಿಗೆ ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ವಹಿವಾಟು ಅಂತ್ಯಗೊಂಡಿತು.

ಸೆನ್ಸೆಕ್ಸ್‌ 31 ಅಂಶ ಏರಿಕೆ ಕಂಡು 72,271ಕ್ಕೆ ತಲುಪಿತು. ದಿನದ ವಹಿವಾಟಿನಲ್ಲಿ 72,031 ಅಂಶ ಕನಿಷ್ಠ ಮಟ್ಟಕ್ಕೆ ಇಳಿದ ಸೆನ್ಸಕ್ಸ್‌, ನಂತರ 72,561 ಗರಿಷ್ಠ ಮಟ್ಟಕ್ಕೆ ಮುಟ್ಟಿತ್ತು. ನಿಫ್ಟಿ 10.50 ಅಂಶ ಏರಿಕೆಯಾಗಿ, 21,741ಕ್ಕೆ ತಲುಪಿತು.‌

2023ರಲ್ಲಿ ಬಿಎಸ್‌ಇ 11,399 ಅಂಶ (ಶೇ 18.73) ಮತ್ತು ನಿಫ್ಟಿ 3,626 ಅಂಶ (ಶೇ 20) ಏರಿಕೆಯಾಗಿದ್ದು, ಹೂಡಿಕೆದಾರರಿಗೆ ಲಾಭ ತಂದುಕೊಟ್ಟಿವೆ.

ADVERTISEMENT

ನೆಸ್ಟ್ಲೆ, ಟೆಕ್‌ ಮಹೀಂದ್ರ, ಎಚ್‌ಸಿಎಲ್ ಟೆಕ್ನಾಲಜೀಸ್‌, ಟಾಟಾ ಮೋಟರ್ಸ್‌, ವಿಪ್ರೊ ಮತ್ತು ಐಟಿಸಿ ಷೇರುಗಳು ಗಳಿಕೆ ಕಂಡಿವೆ. ಭಾರ್ತಿ ಏರ್‌ಟೆಲ್‌, ಮಹೀಂದ್ರ ಆ್ಯಂಡ್‌ ಮಹೀಂದ್ರ, ಬಜಾಜ್‌ ಫಿನ್‌ಸರ್ವ್‌, ಎಚ್‌ಡಿಎಫ್‌ಸಿ ಬ್ಯಾಂಕ್, ಎನ್‌ಟಿಪಿಸಿ ಮತ್ತು ಹಿಂದೂಸ್ತಾನ್‌ ಯೂನಿಲಿವರ್‌ ಇಳಿಕೆ ಕಂಡಿವೆ. ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ ಶೇ 0.14ರಷ್ಟು ಇಳಿದು, 77.04 ಡಾಲರ್‌ಗೆ ತಲುಪಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.