ADVERTISEMENT

ಪೇಟೆಯಲ್ಲಿ ಖರೀದಿ ಭರಾಟೆ

ವಿದೇಶಿ ಸಾಂಸ್ಥಿಕ ಬಂಡವಾಳ ಒಳಹರಿವು ಹೆಚ್ಚಳ

ಪಿಟಿಐ
Published 30 ಮೇ 2019, 19:29 IST
Last Updated 30 ಮೇ 2019, 19:29 IST
sensex
sensex   

ಮುಂಬೈ: ರಿಲಯನ್ಸ್‌, ಎಚ್‌ಡಿಎಫ್‌ಸಿ ಮತ್ತು ಟಿಸಿಎಸ್‌ ಷೇರುಗಳ ಉತ್ತಮ ಗಳಿಕೆಯಿಂದಾಗಿ ಷೇರುಪೇಟೆಯ ಗುರುವಾರದ ವಹಿ
ವಾಟು ದಾಖಲೆ ಮಟ್ಟದಲ್ಲಿ ಅಂತ್ಯಗೊಂಡಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 329 ಅಂಶ ಹೆಚ್ಚಾಗಿ 39,831 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 85 ಅಂಶ ಹೆಚ್ಚಾಗಿ 11,946 ಅಂಶಗಳಿಗೆ ತಲುಪಿತು. ನರೇಂದ್ರ ಮೋದಿ ಅವರು ಪ್ರಧಾನಿಯಾಗಿಎರಡನೇ ಅವಧಿಗೆ ಅಧಿಕಾರ ಸ್ವೀಕರಿಸಿರುವುದು ಹೂಡಿಕೆ ಚಟುವಟಿಕೆಯನ್ನು ಹೆಚ್ಚಾಗುವಂತೆ ಮಾಡಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 1,664 ಕೋಟಿ ಮೌಲ್ಯದ ಷೇರುಗಳನ್ನೂ ಖರೀದಿಸಿದ್ದಾರೆ.

ADVERTISEMENT

ರೂಪಾಯಿ ಮೌಲ್ಯ ಇಳಿಕೆ: ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 3 ದಿನಗಳಲ್ಲಿ 36 ಪೈಸೆ ಇಳಿಕೆ ಕಂಡಿದೆ. ಗುರುವಾರ 4 ಪೈಸೆ ಇಳಿಕೆಯಾಗಿ ಒಂದು ಡಾಲರ್‌ಗೆ ₹ 69.87 ರಂತೆ ವಿನಿಮಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.