ADVERTISEMENT

ಷೇರುಪೇಟೆ ಕುಸಿತ | ಸೆನ್ಸೆಕ್ಸ್‌ 167; ನಿಫ್ಟಿ 31 ಅಂಶ ಇಳಿಕೆ

ಪಿಟಿಐ
Published 9 ಅಕ್ಟೋಬರ್ 2024, 14:48 IST
Last Updated 9 ಅಕ್ಟೋಬರ್ 2024, 14:48 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಬೆನ್ನಲ್ಲೇ ಬುಧವಾರ ನಡೆದ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳು ಕುಸಿತ ಕಂಡಿವೆ. 

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 167 ಅಂಶ ಇಳಿಕೆ ಕಂಡು 81,467 ಅಂಶಗಳಲ್ಲಿ ಸ್ಥಿರಗೊಂಡಿತು. ಆರಂಭಿಕ ವಹಿವಾಟಿನಲ್ಲಿ 684 ಅಂಶ ಏರಿಕೆ ಕಂಡಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 31 ಅಂಶ ಇಳಿಕೆ ಕಂಡು, 24,981 ಅಂಶಗಳಲ್ಲಿ ಮುಕ್ತಾಯಗೊಂಡಿತು.

ADVERTISEMENT

ಸೆನ್ಸೆಕ್ಸ್‌ ಗುಚ್ಛದಲ್ಲಿನ ಐಟಿಸಿ, ನೆಸ್ಲೆ ಇಂಡಿಯಾ, ಎಚ್‌ಯುಎಲ್‌, ರಿಲಯನ್ಸ್ ಇಂಡಸ್ಟ್ರಿಸ್‌, ಎಲ್‌ ಆ್ಯಂಡ್ ಟಿ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ. 

ಟಾಟಾ ಮೋಟರ್ಸ್‌, ಟೆಕ್‌ ಮಹೀಂದ್ರ, ಎಸ್‌ಬಿಐ, ಮಾರುತಿ ಸುಜುಕಿ, ಬಜಾಜ್‌ ಫೈನಾನ್ಸ್‌, ಎಕ್ಸಿಸ್‌ ಬ್ಯಾಂಕ್‌, ಬಜಾಜ್‌  ಫಿನ್‌ಸರ್ವ್‌ ಮತ್ತು ಭಾರ್ತಿ ಏರ್‌ಟೆಲ್‌ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.