ADVERTISEMENT

ಸೆನ್ಸೆಕ್ಸ್ 508 ಅಂಶ ಕುಸಿತ

ಪಿಟಿಐ
Published 12 ಜುಲೈ 2022, 14:39 IST
Last Updated 12 ಜುಲೈ 2022, 14:39 IST
   

ಮುಂಬೈ: ಹೂಡಿಕೆದಾರರು ಮಾಹಿತಿ ತಂತ್ರಜ್ಞಾನ, ಬ್ಯಾಂಕಿಂಗ್ ಮತ್ತು ಎಫ್‌ಎಂಸಿಜಿ ವಲಯಗಳ ಷೇರು ಮಾರಾಟ ಮುಂದುವರಿಸಿದ ಕಾರಣ ದೇಶದ ಷೇರುಪೇಟೆ ಸೂಚ್ಯಂಕಗಳು ಮಂಗಳವಾರ ಕುಸಿತ ದಾಖಲಿಸಿದವು.

ವಿದೇಶಿ ಬಂಡವಾಳದ ಹೊರಹರಿವು ನಿಂತಿಲ್ಲದಿರುವುದು, ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಇನ್ನಷ್ಟು ಕುಸಿತ ಕಂಡಿರುವುದು ಕೂಡ ಸೂಚ್ಯಂಕಗಳ ಕುಸಿತಕ್ಕೆ ಕಾರಣವಾದವು ಎಂದು ವರ್ತಕರು ತಿಳಿಸಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 508 ಅಂಶ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 157 ಅಂಶ ಕುಸಿದವು. ಇನ್ಫೊಸಿಸ್‌ ಷೇರುಗಳು ಗರಿಷ್ಠ ಪ್ರಮಾಣದ ಕುಸಿತ ಕಂಡವು.

ADVERTISEMENT

‘ಹಣದುಬ್ಬರದ ಅಂಕಿ–ಅಂಶಗಳು ಬಿಡುಗಡೆ ಆಗಿರುವ ಕಾರಣ ಬಡ್ಡಿ ದರ ಹೆಚ್ಚಳದ ಭೀತಿ ಮತ್ತೆ ಕಾಡಲಾರಂಭಿಸಿದೆ. ಹಣದುಬ್ಬರದ ಒತ್ತಡದಿಂದಾಗಿ ಅಮೆರಿಕದಲ್ಲಿ ಬಡ್ಡಿ ದರವು ಇನ್ನಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇ 2.37ರಷ್ಟು ಕಡಿಮೆ ಆಗಿದ್ದು ಪ್ರತಿ ಬ್ಯಾರೆಲ್‌ಗೆ 104.6 ಡಾಲರ್‌ಗೆ ತಲುಪಿದೆ.

=

ವಲಯವಾರು ಇಳಿಕೆ (ಬಿಎಸ್‌ಇ)

ಐ.ಟಿ.;1.29

ತಂತ್ರಜ್ಞಾನ;1.21

ಲೋಹ;1.16

ಆಟೊಮೊಬೈಲ್;1.13

ಎಫ್‌ಎಂಸಿಜಿ;1.03

ಬ್ಯಾಂಕ್;0.94

ಬಂಡವಾಳ ಸರಕು;0.91

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.