ಬೆಂಗಳೂರು: ಗ್ರಾಹಕರ ಮನೆ ಬಾಗಿಲಿಗೆ ವಾಹನಗಳ ಸರ್ವೀಸ್ ಸೌಲಭ್ಯ ಒದಗಿಸುವ ಸಲುವಾಗಿ ಶೆಲ್ ಲೂಬ್ರಿಕೆಂಟ್ಸ್ ಮತ್ತು ಬೆಂಗಳೂರಿನ ನವೋದ್ಯಮ ಪಿಟ್ಸ್ಟಾಪ್ ಒಪ್ಪಂದ ಮಾಡಿಕೊಂಡಿವೆ.
ಅತ್ಯಂತ ಕಡಿಮೆ ಸಂಪರ್ಕದೊಂದಿಗೆ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಸುರಕ್ಷಿತ ಮತ್ತು ವಿಶ್ವಾಸಾರ್ಹವಾದ ಸೇವೆಗಳನ್ನು ಒದಗಿಸುವುದು ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ.
ಸಂಚಾರಿ ವಾಹನದ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತೆರಳಿ ವಾಹನಗಳನ್ನು ಸರ್ವೀಸ್ ಮಾಡಲಾಗುತ್ತದೆ. ಪಿಪಿಇ ಬಳಕೆ ಮತ್ತು ಪ್ರತಿಯೊಂದು ಉಪಕರಣವನ್ನೂ ಸ್ಯಾನಿಟೈಸ್ ಮಾಡುವುದು ಸೇರಿದಂತೆ ಎಲ್ಲಾ ಸುರಕ್ಷತಾ ಶಿಷ್ಚಾಚಾರಗಳನ್ನು ಅನುಸರಿಸುವುದರ ಬಗ್ಗೆ ಮೆಕ್ಯಾನಿಕ್ಗಳಿಗೆ ತರಬೇತಿ ನೀಡಲಾಗಿದೆ. ಮಾಹಿತಿಗಾಗಿhttps://www.getpitstop.com ಸಂಪರ್ಕಿಸಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.