
ನವದೆಹಲಿ: ದಾಖಲೆಯ ಮಟ್ಟವನ್ನು ತಲುಪಿದ್ದ ಬೆಳ್ಳಿಯ ಬೆಲೆಯು ಗುರುವಾರದ ವಹಿವಾಟಿನಲ್ಲಿ ದೊಡ್ಡ ಮಟ್ಟದ ಕುಸಿತ ಕಂಡಿದೆ. ಕೆ.ಜಿ. ಬೆಳ್ಳಿಯ ಬೆಲೆಯು ಇಲ್ಲಿನ ಚಿನಿವಾರ ಪೇಟೆಯಲ್ಲಿ ₹12,500ರಷ್ಟು ಇಳಿಕೆ ಕಂಡಿದ್ದು, ₹2,43,500ಕ್ಕೆ ತಲುಪಿದೆ.
ಇದೇ ವೇಳೆ ಶೇಕಡ 99.9ರಷ್ಟು ಪರಿಶುದ್ಧತೆಯ ಚಿನ್ನದ ಬೆಲೆಯು 10 ಗ್ರಾಂಗೆ ₹900ರಷ್ಟು ಕಡಿಮೆ ಆಗಿದ್ದು, ₹1,40,500ಕ್ಕೆ ತಲುಪಿದೆ. ಜಗತ್ತಿನ ಹಲವೆಡೆ ಹೂಡಿಕೆದಾರರು ಲಾಭ ಗಳಿಕೆಯ ಉದ್ದೇಶದಿಂದ ಅಮೂಲ್ಯ ಲೋಹಗಳ ಮಾರಾಟಕ್ಕೆ ಮುಂದಾಗಿದ್ದುದು ಬೆಲೆ ಇಳಿಕೆಗೆ ಒಂದು ಕಾರಣ ಎಂದು ವರ್ತಕರು ತಿಳಿಸಿದ್ದಾರೆ.
ಬುಧವಾರದ ವಹಿವಾಟಿನಲ್ಲಿ ಬೆಳ್ಳಿಯ ಬೆಲೆಯು ಕೆ.ಜಿ.ಗೆ ₹5,000 ಏರಿಕೆ ಆಗಿ ದಾಖಲೆಯ ₹2,56,000ಕ್ಕೆ ತಲುಪಿತ್ತು ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.