ADVERTISEMENT

Gold Price |10 ಗ್ರಾಂ ಚಿನ್ನದ ದರ ₹1 ಸಾವಿರ, ಬೆಳ್ಳಿ ದರ KGಗೆ ₹4 ಸಾವಿರ ಜಿಗಿತ

ಪಿಟಿಐ
Published 23 ಜುಲೈ 2025, 15:30 IST
Last Updated 23 ಜುಲೈ 2025, 15:30 IST
<div class="paragraphs"><p>ಚಿನ್ನ, ಬೆಳ್ಳಿ </p></div>

ಚಿನ್ನ, ಬೆಳ್ಳಿ

   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಬುಧವಾರದ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಏರಿಕೆಯಾಗಿದೆ.

ಬೆಳ್ಳಿ ದರವು ಕೆ.ಜಿಗೆ ₹4 ಸಾವಿರ ಹೆಚ್ಚಳವಾಗಿ, ₹1.18 ಲಕ್ಷದಂತೆ ಮಾರಾಟವಾಗಿದೆ. 10 ಗ್ರಾಂ ಚಿನ್ನದ ದರವು (ಶೇ 99.9 ಪರಿಶುದ್ಧತೆ) ₹1 ಸಾವಿರ ಏರಿಕೆಯಾಗಿ, ₹1,01,020 ಆಗಿದೆ. ಆಭರಣ ಚಿನ್ನದ ಬೆಲೆಯು (ಶೇ 99.5 ಪರಿಶುದ್ಧತೆ) ₹900 ಹೆಚ್ಚಳವಾಗಿ, ₹1,00,450ಕ್ಕೆ ತಲುಪಿದೆ. ದಾಸ್ತಾನುಗಾರರಿಂದ ಖರೀದಿ ಹೆಚ್ಚಿದ್ದರಿಂದ ಬೆಲೆ ಏರಿಕೆಯಾಗಿದೆ ಎಂದು ಅಖಿಲ ಭಾರತ ಸರಾಫ್‌ ಅಸೋಸಿಯೇಷನ್ ತಿಳಿಸಿದೆ.

ADVERTISEMENT

ಕಳೆದ ಮೂರು ದಿನಗಳ ವಹಿವಾಟಿನಲ್ಲಿ ಬೆಳ್ಳಿ ದರವು ಕೆ.ಜಿಗೆ ₹7,500ರಷ್ಟು ಹೆಚ್ಚಳವಾಗಿದೆ.

‘ಅಮೆರಿಕ–ಯುರೋಪ್‌ ನಡುವೆ ವ್ಯಾಪಾರ ಒಪ್ಪಂದವು ಆಗಸ್ಟ್‌ 1ರ ಒಳಗೆ ಆಗುವ ಸಾಧ್ಯತೆ ಕಾಣುತ್ತಿಲ್ಲ. ಈ ಅನಿಶ್ಚಿತತೆಯು ಮಾರುಕಟ್ಟೆಯಲ್ಲಿ ಆತಂಕ ಹೆಚ್ಚಿಸಿದೆ. ಇದರಿಂದಾಗಿ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದಾಗಿದ್ದರಿಂದ ಹಳದಿ ಲೋಹದ ಬೆಲೆ ಏರಿಕೆಯಾಯಿತು’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಸೌಮಿಲ್‌ ಗಾಂಧಿ ಹೇಳಿದ್ದಾರೆ. 

ಡಾಲರ್ ಮೌಲ್ಯದಲ್ಲಿನ ಇಳಿಕೆಯು ಸಹ ಚಿನ್ನದ ದರ ಹೆಚ್ಚಳಕ್ಕೆ ನೆರವಾಯಿತು ಎಂದು ಹೇಳಿದ್ದಾರೆ. ಕೈಗಾರಿಕೆಗಳಲ್ಲಿ ಬೆಳ್ಳಿಗೆ ಬೇಡಿಕೆ ಹೆಚ್ಚಳವಾಗಿದೆ. ಇದೇ ಬೆಳ್ಳಿ ದರ ಏರಿಕೆಗೆ ಕಾರಣವಾಗಿದೆ ಎಂದು ವರ್ತಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.