ADVERTISEMENT

ಚಿನ್ನ, ಬೆಳ್ಳಿ ಧಾರಣೆ ಇಳಿಕೆ

ಪಿಟಿಐ
Published 6 ಫೆಬ್ರುವರಿ 2026, 15:50 IST
Last Updated 6 ಫೆಬ್ರುವರಿ 2026, 15:50 IST
<div class="paragraphs"><p>ಚಿನ್ನ</p></div>

ಚಿನ್ನ

   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಶುಕ್ರವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಇಳಿಕೆ ಕಂಡಿದೆ. 

10 ಗ್ರಾಂ ಚಿನ್ನದ (ಶೇ 99.9ರಷ್ಟು ಪರಿಶುದ್ಧತೆ) ದರವು ₹3,400 ಕಡಿಮೆಯಾಗಿ, ₹1,57,200ರಂತೆ ಮಾರಾಟವಾಗಿದೆ. ಬೆಳ್ಳಿ ದರವು ಕೆ.ಜಿಗೆ ₹13 ಸಾವಿರ ಇಳಿಕೆಯಾಗಿ, ₹2.55 ಲಕ್ಷಕ್ಕೆ ಇಳಿದಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ. 

ADVERTISEMENT

ಲಾಭದ ಗಳಿಕೆಗಾಗಿ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿ ಮಾರಾಟಕ್ಕೆ ಮುಂದಾಗಿದ್ದಾರೆ. ಇದು ದರ ಇಳಿಕೆಗೆ ಕಾರಣ ಎಂದು ವರ್ತಕರು ತಿಳಿಸಿದ್ದಾರೆ.

ಸೆನ್ಸೆಕ್ಸ್, ನಿಫ್ಟಿ ಏರಿಕೆ: ದೇಶದ ಷೇರುಪೇಟೆ ಸೂಚ್ಯಂಕಗಳು ಶುಕ್ರವಾರ ಏರಿಕೆ ಕಂಡಿವೆ. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 266 ಅಂಶ ಏರಿಕೆಯಾಗಿ, 83,580ಕ್ಕೆ ವಹಿವಾಟು ಕೊನೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 50 ಅಂಶ ಹೆಚ್ಚಳವಾಗಿ, 25,693ಕ್ಕೆ ಅಂತ್ಯಗೊಂಡಿದೆ.

ರೂಪಾಯಿ ಮೌಲ್ಯ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 36 ಪೈಸೆಯಷ್ಟು ಕುಸಿದಿದೆ. ವಹಿವಾಟಿನ ಅಂತ್ಯದ ವೇಳೆಗೆ ರೂಪಾಯಿ ಮೌಲ್ಯವು ₹90.70 ಆಗಿದೆ. 

ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಅನಿಶ್ಚಿತತೆ ಮತ್ತು ಕಚ್ಚಾ ತೈಲದ ಬೆಲೆ ಹೆಚ್ಚಳವು ರೂಪಾಯಿ ಮೌಲ್ಯಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.