ಬೆಂಗಳೂರು: ಮನೆಗಳನ್ನು ‘ಸ್ಮಾರ್ಟ್ ಹೋಮ್’ ಆಗಿಸಲು ‘ಸ್ನೈಡರ್ ಎಲೆಕ್ಟ್ರಿಕ್ಸ್’ ತನ್ನ ನೂತನ ತಂತ್ರಜ್ಞಾನ ‘ಈಸಿ ಹೋಮ್’ ಪರಿಚಯಿಸಿದೆ.
ಮೊಬೈಲ್ ಆ್ಯಪ್ ಮೂಲಕವೇ ಮನೆಯಲ್ಲಿ ಬಳಸುವ ಕಿಟಕಿಗಳ ಪರದೆ, ಫ್ಯಾನ್, ದೀಪ ಸೇರಿದಂತೆ ಎಲ್ಲ ಪರಿಕರಗಳನ್ನು ನಿಯಂತ್ರಿಸಬಹುದಾಗಿದೆ.
‘ವಿದ್ಯುತ್ ಮಿತವ್ಯಯದ ಜತೆಗೆ ಜೀವನಶೈಲಿಯನ್ನು ಉನ್ನತೀಕರಿಸಲುಇದನ್ನು ಆವಿಷ್ಕರಿಸಲಾಗಿದೆ‘ ಎಂದು ಕಂಪನಿಯ ಉಪ ಮುಖ್ಯಸ್ಥ ಶ್ರೀನಿವಾಸ್ ಶಾನುಭೋಗ್ ತಿಳಿಸಿದರು.
‘ಶೇ 53ರಷ್ಟು ರಿಯಾಯಿತಿ ದರ ಕಳೆದರೆ ಕ್ರಮವಾಗಿ ₹28,998, ₹56,998, ₹63,998ಗಳಿಗೆ ಮನೆ
ಯನ್ನು ಸ್ಮಾರ್ಟ್‌ಹೋಮ್ ಆಗಿಪರಿವರ್ತಿಸಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.