ADVERTISEMENT

ವಿತ್ತೀಯ ಕೊರತೆ ಮಿತಿಹೆಚ್ಚಿಸಿ: ರಾಜ್ಯಗಳ ಸಲಹೆ

ಬಜೆಟ್‌ ಪೂರ್ವ ಸಭೆ ನಡೆಸಿದ ಸಚಿವೆ ನಿರ್ಮಲಾ

ಪಿಟಿಐ
Published 18 ಡಿಸೆಂಬರ್ 2019, 19:41 IST
Last Updated 18 ಡಿಸೆಂಬರ್ 2019, 19:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಉಪಭೋಗಕ್ಕೆ ಉತ್ತೇಜನ ನೀಡಲು ವಿತ್ತೀಯ ಕೊರತೆ ಗುರಿಯನ್ನು ಶೇ 4ಕ್ಕೆ ಹೆಚ್ಚಿಸುವಂತೆ ಕೆಲವು ರಾಜ್ಯಗಳು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಸಲಹೆ ನೀಡಿವೆ.

ಹೂಡಿಕೆ ಚಟುವಟಿಕೆಯನ್ನು ಹೆಚ್ಚಿಸುವ ಮೂಲಕ ಜನರ ಖರೀದಿ ಸಾಮರ್ಥ್ಯ ಸುಧಾರಿಸುವಂತೆ ಮಾಡಬೇಕು. ಆ ಮೂಲಕಮಂದಗತಿಯ ಆರ್ಥಿಕತೆಗೆ ಚೇತರಿಕೆಗೆ ನೆರವಾಗುವಂತೆಬಜೆಟ್‌ ಪೂರ್ವ ಸಭೆಯಲ್ಲಿ ಕೆಲವು ರಾಜ್ಯಗಳು ಸಚಿವರಿಗೆ ತಿಳಿಸಿವೆ.

ಪ್ರಸಕ್ತ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆ ಶೇ 3.4ರಷ್ಟಾಗಲಿದೆ ಎಂದು ಬಜೆಟ್‌ನಲ್ಲಿ ಅಂದಾಜಿಸಲಾಗಿತ್ತು. ಆದರೆ,ನಿರ್ಮಲಾ ಅವರು ಅದನ್ನುಶೇ 3.3ಕ್ಕೆ ಇಳಿಕೆ ಮಾಡಿದ್ದಾರೆ.

ADVERTISEMENT

ಕಾರ್ಪೊರೇಟ್‌ ತೆರಿಗೆ ದರದಲ್ಲಿ ಇಳಿಕೆ ಮಾಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ₹ 1.45 ಲಕ್ಷ ಕೋಟಿ ಹೊರೆಯಾಗುವ ಅಂದಾಜು ಮಾಡಲಾಗಿದೆ. ಇದರಿಂದ ವಿತ್ತೀಯ ಕೊರತೆಯನ್ನು ನಿಯಂತ್ರಿಸಲು ಸವಾಲಾಗಿ ಪರಿಣಮಿಸಿದೆ.

‘ವಿತ್ತೀಯ ಕೊರತೆಯನ್ನು ಶೇ 4ಕ್ಕೆ ನಿಗದಿಪಡಿಸುವಂತೆ ಬಿಹಾರ ಮತ್ತು ಕೇರಳ ರಾಜ್ಯಗಳು ಸಲಹೆ ನೀಡಿವೆ. ಇದಕ್ಕೆ ಹಲವು ರಾಜ್ಯಗಳು ಒಪ್ಪಿಗೆ ನೀಡಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯಗಳ ವೆಚ್ಚದಲ್ಲಿ ಇಳಿಕೆಯಾಗಲಿದೆ’ ಎಂದು ಕೇರಳದ ಹಣಕಾಸು ಸಚಿವ ಥಾಮಸ್‌ ಐಸಾಕ್‌ ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.